ಕ್ರಿಕೆಟ್

ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್: ಧೋನಿಗೆ ಕೊಹ್ಲಿ ಹೃದಯಸ್ಪರ್ಶಿ ಸಂದೇಶ

ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಂಡದ ಭಾವಿ ನಾಯಕ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದು, ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್ ಎಂದು ಹೇಳಿದ್ದಾರೆ.

ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್: ಧೋನಿಗೆ ಕೊಹ್ಲಿ ಹೃದಯಸ್ಪರ್ಶಿ ಸಂದೇಶ
ಧೋನಿ ಮತ್ತು ಕೊಹ್ಲಿ (ಸಂಗ್ರಹ ಚಿತ್ರ)
Published On :

ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಂಡದ ಭಾವಿ ನಾಯಕ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದು, ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್ ಎಂದು ಹೇಳಿದ್ದಾರೆ.

ಕೊಹ್ಲಿಗೆ ನಾಯಕತ್ವ ವಹಿಸುವ ಕುರಿತು ಉಂಟಾಗಿದ್ದ ಸಾಕಷ್ಟು ವಿದ್ಯಮಾನಗಳು ಕೊಹ್ಲಿ ಹಾಗೂ ಧೋನಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಶಂಕೆಯನ್ನು ಮೂಡಿಸುತ್ತಿದ್ದವು. ಆದರೆ ಇಂತಹ ಆರೋಪಗಳು ಬಂದಾಗಲೆಲ್ಲಾ ಈ ಜೋಡಿ  ಅದು ಸುಳ್ಳು ಎಂದು ಸಾಬೀತುಪಡಿಸಿತ್ತು. ಇದೀಗ ಮತ್ತೊಮ್ಮೆ ಈ ಜೋಡಿ ತಾವಿಬ್ಬರೂ ಉತ್ತಮ ಸ್ನೇಹಿತರು ಎಂಬುದನ್ನು ಸಾಬೀತುಪಡಿಸಿದ್ದು, ನಾಯಕತ್ವ ತ್ಯಜಿಸಿದ ಮಹೇಂದ್ರ ಸಿಂಗ್ ಧೋನಿಗೆ ಕೊಹ್ಲಿ ಟ್ವಿಟರ್ ನಲ್ಲಿ ಶುಭಾಶಯ  ತಿಳಿಸಿದ್ದಾರೆ.

ನಾಯಕತ್ವ ತ್ಯಜಿಸಿದ ಧೋನಿಗೆ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಗೌರವ ಸಲ್ಲಿಕೆ ಮಾಡಿದ್ದು, ಟ್ವಿಟರ್ ನಲ್ಲಿ ಈ ಬಗ್ಗೆ ಕೊಹ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಯುವ ಕ್ರಿಕೆಟಿಗರು ಎಂತಹ ನಾಯಕ ತಮಗೆ ಬೇಕು ಎಂಬುದನ್ನು  ತೋರಿಸಿಕೊಟ್ಟ ನಿಮಗೆ ನಾನು ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ. ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್ ಆಗಿರುತ್ತೀರಿ ಭಾಯ್ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.