ಕ್ರಿಕೆಟ್

ಎಂಎಸ್ ಧೋನಿಯದ್ದು ಒಳ್ಳೆಯ ನಿರ್ಧಾರ: ದ್ರಾವಿಡ್

ಟೀಂ ಇಂಡಿಯಾ ಸೀಮಿತ ಓವರ್ ತಂಡದ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿರುವ ಎಂಎಸ್ ಧೋನಿ ಅವರ ನಿರ್ಧಾರ ಒಳ್ಳೆಯದ್ದು ಎಂದು ಮಾಜಿ ಟೀಂ...

ಎಂಎಸ್ ಧೋನಿಯದ್ದು ಒಳ್ಳೆಯ ನಿರ್ಧಾರ: ದ್ರಾವಿಡ್
ಎಂಎಸ್ ಧೋನಿ, ರಾಹುಲ್ ದ್ರಾವಿಡ್
Published On :
ನವದೆಹಲಿ: ಟೀಂ ಇಂಡಿಯಾ ಸೀಮಿತ ಓವರ್ ತಂಡದ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿರುವ ಎಂಎಸ್ ಧೋನಿ ಅವರ ನಿರ್ಧಾರ ಒಳ್ಳೆಯದ್ದು ಎಂದು ಮಾಜಿ ಟೀಂ ಇಂಡಿಯಾ ಆಟಗಾರ ರಾಹುಲ್ ದ್ರಾವಿಡ್ ಅಭ್ರಿಪ್ರಾಯಪಟ್ಟಿದ್ದಾರೆ. 
ಧೋನಿ ನಿವೃತ್ತಿ ನಿರ್ಧಾರದಲ್ಲಿ ಯಾವುದೇ ಅಚ್ಚರಿ ಇಲ್ಲ. ಧೋನಿ ನಾಯಕತ್ವ ನಿವೃತ್ತಿ ಬಗ್ಗೆ ಈ ಹಿಂದಿನಿಂದಲೂ ಮಾತುಗಳು ಕೇಳಿಬರುತ್ತಿದ್ದವು. ತಡವಾದರೂ ಧೋನಿ ಉತ್ತಮ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ. 
ಧೋನಿ ದೃಷ್ಠಿಕೋನದಿಂದ ನೋಡುವುದಾದರೆ 2019ರ ವಿಶ್ವಕಪ್ ನಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲು ಇಚ್ಛಿಸುವುದಿಲ್ಲವೆಂದೆನಿಸುತ್ತದೆ. ಸುದೀರ್ಘ ನಾಯಕತ್ವದ ಜವಾಬ್ದಾರಿಯಿಂದ ಹಿಂದೆ ಸರಿದು ಟೆಸ್ಟ್ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಅವರಿಗೆ ಸೂಕ್ತ ಸಮಯದಲ್ಲಿ ಜವಾಬ್ದಾರಿಯನ್ನು ನೀಡಿದ್ದು ಮುಂದಿನ ವಿಶ್ವಕಪ್ ವೇಳೆ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕಾರಣರಾಗಿದ್ದಾರೆ ಎಂದರು. 
ಎಂಎಸ್ ಧೋನಿ ಅವರ ಅನುಭವ ಮತ್ತು ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಒತ್ತಡದ ಸಮಯದಲ್ಲಿ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದರು. ಇಂತಹ ಸಾಮರ್ಥ್ಯ ಸುಲಭವಾಗಿ ಸಿಗುವುದಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.