ಕ್ರಿಕೆಟ್

ಕುಂಬ್ಳೆ ದಾಖಲೆ ಮುರಿದ ಅಶ್ವಿನ್: ತವರಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್

ಭಾರತದ ಖ್ಯಾತ ಕ್ರಿಕೆಟಿಗ, ಮಾಜಿ ನಾಯಕ ಮತ್ತು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಅಲ್​ರೌಂಡರ್ ಆರ್.ಅಶ್ವಿನ್ ಶನಿವಾರ ಮುರಿದಿದ್ದಾರೆ.

ಕುಂಬ್ಳೆ ದಾಖಲೆ ಮುರಿದ ಅಶ್ವಿನ್: ತವರಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್
ಆರ್ ಅಶ್ವಿನ್ (ಸಂಗ್ರಹ ಚಿತ್ರ)
Published On :

ಪುಣೆ: ಭಾರತದ ಖ್ಯಾತ ಕ್ರಿಕೆಟಿಗ, ಮಾಜಿ ನಾಯಕ ಮತ್ತು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಅಲ್​ರೌಂಡರ್ ಆರ್.ಅಶ್ವಿನ್ ಶನಿವಾರ ಮುರಿದಿದ್ದಾರೆ. ಸ್ವದೇಶದಲ್ಲಿ ಆಡಿದ 10 ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು  ವಿಕೆಟ್ ಪಡೆದ ಸಾಧನೆ ಇದೀಗ ಅಶ್ವಿನ್ ಪಾಲಾಗಿದೆ. ಆ ಮೂಲಕ ಭಾರತದ ಸ್ಪಿನ್ ಅಸ್ತ್ರ ಅಶ್ವಿನ್ ನೂತನ ಮೈಲುಗಲ್ಲು ಸಾಧಿಸಿದ್ದಾರೆ.

ಪುಣೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ 3ನೇ ದಿನ ಅಶ್ವಿನ್ ಈ ಸಾಧನೆ ಮಾಡಿದ್ದು, ತವರಿನಲ್ಲಿ ತಮ್ಮ ಒಟ್ಟು ವಿಕೆಟ್ ಗಳ ಸಂಖ್ಯೆಯನ್ನು 68ಕ್ಕೆ  ಏರಿಸಿಕೊಂಡಿದ್ದಾರೆ. ಈ ಹಿಂದೆ ಕುಂಬ್ಳೆ ತವರಿನಲ್ಲಿ 64 ವಿಕೆಟ್ ಗಳಿಸಿದ್ದು, ಈ ವರೆಗಿನ ಭಾರತೀಯ ಬೌಲರ್ ನ ಗರಿಷ್ಟ ವಿಕೆಟ್ ಗಳಿಕೆ ಸಾಧನೆಯಾಗಿತ್ತು. ಈ ಸಾಧನೆಯನ್ನು ಅಶ್ವಿನ್ ದಾಟಿದ್ದು, ತವರಿನಲ್ಲಿ ಅತೀ ಹೆಚ್ಚು ವಿಕೆಟ್  ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೈಯ್ನ್ 78 ವಿಕೆಟ್ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ.

ಆಸಿಸ್ ಕ್ರಿಕೆಟ್ ದಂತಕಥೆ ಗ್ಲೇನ್ ಮೆಗ್ರಾತ್ ದಾಖಲೆಯೂ ಧೂಳಿಪಟ
ಇನ್ನು ಇದೇ ಪಂದ್ಯದಲ್ಲಿ ಅಶ್ವಿನ್ ಆಸ್ಟ್ರೇಲಿಯಾ ತಂಡ ಬೌಲಿಂಗ್ ದಂತಕಥೆ ಗ್ಲೇನ್ ಮೆಗ್ರಾತ್ ಅವರ ದಾಖಲೆಯನ್ನೂ ಕೂಡ ಮುರಿದಿದ್ದಾರೆ, ಮೆಗ್ರಾತ್ ತವರಿನಲ್ಲಿ 66 ವಿಕೆಟ್ ಗಳಿಸಿದ್ದು, ಅಶ್ವಿನ್ 68 ವಿಕೆಟ್ ಕಬಳಿಸುವ ಮೂಲಕ  ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.