ವಿಶ್ವದ ಅತೀ ಹೆಚ್ಚು ಶತಕ ಗಳಿಸಿದ ಟಾಪ್ 10 ಕ್ರಿಕೆಟಿಗರ ಪಟ್ಟಿ ಸೇರಿದ ಕೊಹ್ಲಿ!
ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಕ್ರಿಕೆಟಿಗರ ಟಾಪ್ 10 ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಹೈದರಾಬಾದ್: ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಕ್ರಿಕೆಟಿಗರ ಟಾಪ್ 10 ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಶತಕದೊಂದಿಗೆ ಕೊಹ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 43ಕ್ಕೆ ಏರಿಸಿಕೊಂಡಿದ್ದು, ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಮತ್ತೊಂದು ಪ್ರಮುಖ ಅಂಶವೆಂದರೆ ಈ ಪಟ್ಟಿಗೆ ಸೇರ್ಪಡೆಯಾದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದು, ಒಟ್ಟು 100 ಶತಕಗಳನ್ನು ಸಿಡಿಸಿರುವ ಭಾರತದ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಇದೇ ಸಚಿನ್ ತೆಂಡೂಲ್ಕರ್ ತಮ್ಮ ದಾಖಲೆಗಳನ್ನು ಯಾರು ಮುರಿಯಬಲ್ಲರು ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಹೆಸರುಗಳನ್ನು ಹೇಳಿದ್ದರು. ಸಚಿನ್ ಅವರ ಹೇಳಿಕೆಯಂತೆಯೇ ವಿರಾಟ್ ಕೊಹ್ಲಿ ತಮ್ಮ ಉತ್ತಮ ಪ್ರದರ್ಶನದ ಮೂಲಕ ಸಚಿನ್ ದಾಖಲೆಗಳನ್ನು ಹಿಂಬಾಲಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ವಯಸ್ಸು ಈಗಿನ್ನೂ 28 ವರ್ಷ.. ಅದಾಗಲೇ ವಿಶ್ವದ ಅತೀ ಹೆಚ್ಚು ಶತಕ ಗಳಿಸಿದ ಟಾಪ್ 10 ಕ್ರಿಕೆಟಿಗರ ಪಟ್ಟಿ ಸೇರಿರುವುದು ಕೊಹ್ಲಿ ಸಚಿನ್ ದಾಖಲೆಯನ್ನು ಮುರಿಯುತ್ತಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇನ್ನು ಕೊಹ್ಲಿ ಮತ್ತು ಸಚಿನ್ ರನ್ನು ಹೊರತು ಪಡಿಸಿದರೆ ಪಟ್ಟಿಯಲ್ಲಿ ಮೂರನೇ ಭಾರತೀಯ ಆಟಗಾರನಾಗಿ ರಾಹುಲ್ ದ್ರಾವಿಡ್ ಕಾಣಿಸಿಕೊಂಡಿದ್ದಾರೆ. ದ್ರಾವಿಡ್ ಒಟ್ಟು 48 ಶತಕಗಳನ್ನು ಸಿಡಿಸಿದ್ದು, ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿ ಇಂತಿದೆ.
1. ಸಚಿನ್ ತೆಂಡೂಲ್ಕರ್ (ಭಾರತ) 100 ಶತಕ
2. ರಿಕ್ಕಿ ಪಾಟಿಂಗ್ (ಆಸ್ಟ್ರೇಲಿಯಾ) 71 ಶತಕ
3. ಕುಮಾರ್ ಸಂಗಕ್ಕಾರ (ಶ್ರೀಲಂಕಾ) 63 ಶತಕ
4. ಜಾಕ್ ಕಾಲಿಸ್ (ದ.ಆಫ್ರಿಕಾ) 62 ಶತಕ
5. ಮಹೇಲಾ ಜಯವರ್ಧನೆ (ಶ್ರೀಲಂಕಾ) 54 ಶತಕ
6. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) 53 ಶತಕ
7. ಹಶೀಮ್ ಆಮ್ಲಾ (ದ.ಆಫ್ರಿಕಾ) 49 ಶತಕ
8. ರಾಹುಲ್ ದ್ರಾವಿಡ್ (ಭಾರತ) 48 ಶತಕ
9. ಎಬಿಡಿ ವಿಲಿಯರ್ಸ್ (ದ.ಆಫ್ರಿಕಾ) 45 ಶತಕ
10. ವಿರಾಟ್ ಕೊಹ್ಲಿ (ಭಾರತ) 43 ಶತಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


