ಕೋಚ್ ರಾಹುಲ್ ದ್ರಾವಿಡ್ ಅವರ ಅಂಡರ್ 19 ತಂಡಕ್ಕೆ ಆರ್ಥಿಕ ಸಂಕಷ್ಟ
ಅಂಡರ್ 19 ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಆಟಗಾರರಿಗೆ ಮತ್ತು ತಂಡದ ಸಿಬ್ಬಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ...

ಮುಂಬೈ: ಅಂಡರ್ 19 ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಆಟಗಾರರಿಗೆ ಮತ್ತು ತಂಡದ ಸಿಬ್ಬಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದಿನಭತ್ಯೆ ನೀಡದಿದ್ದರಿಂದ ತಂಡ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
19 ವಯೋಮಿತಿ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಸರಣಿ ಆಡಲು ಆರಂಭಿಸಿ 15 ದಿನಗಳು ಕಳೆದಿವೆ. ಇಷ್ಟು ದಿನಗಳಾಗಿದ್ದರು ಬಿಸಿಸಿಐ ದಿನಭತ್ಯೆ ನೀಡಿಲ್ಲ. ಹೀಗಾಗಿ ಆಟಗಾರರು ರಾತ್ರಿ ಊಟಕ್ಕಾಗಿ ಪಾಲಕರಿಂದಲೇ ಹಣ ಪಡೆಯುತ್ತಿದ್ದಾರೆ.
ಲೋಧ ಸಮಿತಿ ಜಾರಿ ಕುರಿತಾಗಿ ಬಿಸಿಸಿಐ ಆಡಳಿತದಲ್ಲಾಗಿರುವ ಬಿಕ್ಕಟ್ಟು ಇದಕ್ಕೆ ಕಾರಣ. ಆಟಗಾರರಿಗೆ ದಿನಭತ್ಯೆ ನೀಡಲು ಕಾರ್ಯದರ್ಶಿ ಸಹಿ ಅಗತ್ಯ. ಆದರೆ ಸುಪ್ರೀಂಕೋರ್ಟ್ ಅಜಯ್ ಶಿರ್ಕೆಯವರನ್ನು ವಜಾ ಮಾಡಿ ಬಳಿಕ ಆ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ. ಇದರಿಂದಾಗಿ ಆಟಗಾರರ ದಿನಭತ್ಯೆ ಹಾಗೂ ಇತರ ಕೆಲಸಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ.
ಯುವ ಆಟಗಾರರು ದಿನಕ್ಕೆ ಬಿಸಿಸಿಐನಿಂದ 6800 ರುಪಾಯಿ ಭತ್ಯೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


