ಕ್ರಿಕೆಟ್

ನಿಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಗೌರವಿಸಿ: ಭಾರತ u-19 ಕ್ರಿಕೆಟಿಗರಿಗೆ ಕೊಹ್ಲಿ ಸಲಹೆ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಂಡರ್-19 ವಿಶ್ವಕಪ್ ನ ಮಹತ್ವ ನನಗೆ ಚನ್ನಾಗಿ ತಿಳಿದಿದೆ. ಅಲ್ಲಿನ ನಮ್ಮ ಪ್ರದರ್ಶನ ನಮ್ಮ ವೃತ್ತಿ ಬದುಕಿನ ದಿಸೆಯನ್ನೇ...

ನಿಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಗೌರವಿಸಿ: ಭಾರತ u-19 ಕ್ರಿಕೆಟಿಗರಿಗೆ ಕೊಹ್ಲಿ ಸಲಹೆ
ವಿರಾಟ್ ಕೊಹ್ಲಿ
Published On :
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಂಡರ್-19 ವಿಶ್ವಕಪ್ ನ ಮಹತ್ವ ನನಗೆ ಚನ್ನಾಗಿ ತಿಳಿದಿದೆ. ಅಲ್ಲಿನ ನಮ್ಮ ಪ್ರದರ್ಶನ ನಮ್ಮ ವೃತ್ತಿ ಬದುಕಿನ ದಿಸೆಯನ್ನೇ ಬದಲಿಸುತ್ತದೆ. ಹೀಗಾಗಿ ನಿಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಗೌರವಿಸಿ ಎಂದು ಭಾರತ ಅಂಡರ್-19 ತಂಡಕ್ಕೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸಲಹೆ ನೀಡಿದ್ದಾರೆ. 
ಐಸಿಸಿ ಅಂಡರ್-19 ವಿಶ್ವಕಪ್ ನನ್ನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಒಂದು ಪ್ರಮುಖ ಮೈಲಿಗಲ್ಲು. ನಮ್ಮ ವೃತ್ತಿ ಬದುಕನ್ನು ನಿರ್ಮಿಸಲು ಹಾಗೂ ಉತ್ತಮ ವೇದಿಕೆ ಪಡೆಯಲು ಇದು ನಮಗೆ ಸಹಾಯ ಮಾಡುತ್ತದೆ. ಆದ್ದರಿಂದ ಈ ಘಟ್ಟ ನನ್ನ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಇದನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಗೌರವಿಸುವುದು ಬಹಳ ಮುಖ್ಯ ಎಂದರು. 
ನ್ಯೂಜಿಲೆಂಡ್ ನಲ್ಲಿ 2018ರ ಜನವರಿ 13ರಿಂದ ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು ಭಾರತ ತಂಡವನ್ನು ಪೃಥ್ವಿ ಶಾ ಮುನ್ನಡೆಸುತ್ತಿದ್ದಾರೆ. ಇನ್ನು ಅಂಡರ್-19 ತಂಡಕ್ಕೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಕೋಚ್ ಆಗಿದ್ದು ಯುವ ಕ್ರಿಕೆಟಿಗರ ಹುಟ್ಟಿಗೆ ಕಾರಣಕರ್ತರಾಗಿದ್ದಾರೆ. 
2008ರಲ್ಲಿ ಭಾರತ ಅಂಡರ್-19 ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ವಿಶ್ವಕಪ್ ಗೆದ್ದು ಬೀಗಿತ್ತು. ಇದೇ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸಿದ್ದರು. ಈ ವೇಳೆ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. 
ನಾನು ಕೇನ್ ವಿರುದ್ಧ ಆಡಿದ್ದೇನೆ. ಆದರೆ ಆತ ಯಾವಾಗಲೂ ತಂಡದಿಂದ ಹೊರಗುಳಿದವರಾಗಿದ್ದರು. ಅವರ ಬ್ಯಾಟಿಂಗ್ ಸಾಮರ್ಥ್ಯ ಬಹಳ ವಿಭಿನ್ನವಾಗಿತ್ತು. ಆದರೆ ಇಂದು ಅವರು ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸುವ ಹಂತಕ್ಕೆ ಬಂದು ತಲುಪಿದ್ದಾರೆ. ಹೀಗಾಗಿ ನಾವು ಅಂಡರ್-19 ಘಟ್ಟವನ್ನು ಹೆಚ್ಚಾಗಿ ಬಳಸಕೊಳ್ಳಬೇಕು ಎಂದು ಕೊಹ್ಲಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.