ಸರಣಿ ಗೆಲುವಿನ ಪಂದ್ಯ: 215 ರನ್‍ಗಳಿಗೆ ಲಂಕಾ ತಂಡವನ್ನು ಕಟ್ಟಿಹಾಕಿದ ಟೀಂ ಇಂಡಿಯಾ
ಪ್ರವಾಸಿ ಶ್ರೀಲಂಕಾ ಹಾಗೂ ಟೀಂ ಇಂಡಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಲಂಕಾ ತಂಡವನ್ನು ಟೀಂ ಇಂಡಿಯಾ...

Published On :
ವಿಶಾಖಪಟ್ಟಂ: ಪ್ರವಾಸಿ ಶ್ರೀಲಂಕಾ ಹಾಗೂ ಟೀಂ ಇಂಡಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಲಂಕಾ ತಂಡವನ್ನು ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕಟ್ಟಿಹಾಕಿದೆ.
ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ 215 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಭಾರತ ಗೆಲ್ಲಲು 216 ರನ್ ಗಳು ಗುರಿ ಪಡೆದಿದೆ.
ಲಂಕಾಗೆ ಆರಂಭಿಕ ಆಘಾತ ಎದುರಾದರು ಉಪುಲ್ ತರಂಗ ಹಾಗೂ ಸಮರವಿಕ್ರಮ 121 ರನ್ ಗಳ ಜತೆಯಾಟ ನೀಡಿದ್ದು ತಂಡ ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿತ್ತು. ಆದರೆ ಯಜುವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಮಾರಕ ದಾಳಿಗೆ ಲಂಕಾ ಪಡೆ ತತ್ತರಿಸಿತು.
ಲಂಕಾ ಪರ ಗುಣತಿಲಕ 13, ಉಪುಲ್ ತರಂಗ 95, ಸಮರವಿಕ್ರಮ 42, ಮ್ಯಾಥ್ಯೂಸ್ 17, ಡಿಕ್ವೇಲ್ಲಾ 8, ಗುಣರತ್ನೆ 17, ಪೆರೇರಾ 6 ರನ್ ಗಳಿಸಿ ಔಟಾದರು.
ಭಾರತ ಪರ ಯಜುವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್ ತಲಾ 3, ಹಾರ್ದಿಕ್ ಪಾಂಡ್ಯ 2, ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್VisakhapatnamRohit Sharmaರೋಹಿತ್ ಶರ್ಮಾವಿಶಾಖಪಟ್ಟಣಂ3rd ODI3ನೇ ಏಕದಿನ ಪಂದ್ಯIndia Vs Srilankaಭಾರತ ವರ್ಸಸ್ ಶ್ರೀಲಂಕಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


