ಭಾರತದ ಕಳಪೆ ಬ್ಯಾಟಿಂಗ್ ಲಂಕಾಗೆ 113 ರನ್ ಗಳ ಸುಲಭದ ಗುರಿ
ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ 38.2 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಎದುರಾಳಿ ತಂಡಕ್ಕೆ 112 ರನ್ ಗಳ ಸುಲಭದ ಗುರಿ ನೀಡಿದೆ.

Published On :
ಧರ್ಮಶಾಲಾ: ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ 38.2 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಎದುರಾಳಿ ತಂಡಕ್ಕೆ 112 ರನ್ ಗಳ ಸುಲಭದ ಗುರಿ ನೀಡಿದೆ.
ಲಂಕಾ ಮಾರಕ ಬೌಲಿಂಗ್ ಗೆ ತತ್ತರಿಸಿದ ಆರಂಭಿಕ ಆಟಗಾರರು ಕನಿಷ್ಠ 2 ಅಂಕಿಯ ರನ್ ಗಳನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಮಹೇಂದ್ರ ಸಿಂಗ್ ಧೋನಿ ಲಂಕಾ ಆಟಗಾರರನ್ನು ಏಕಾಂಗಿಯಾಗಿ ಎದುರಿಸಿ 87 ಎಸೆತಗಳಲ್ಲಿ 65 ರನ್ ಗಳಿಸಿದರು.
ರೋಹಿತ್ ಶರ್ಮಾ (2), ಶಿಖರ್ ಧವನ್ (೦), ಶ್ರೇಯಸ್ ಅಯ್ಯರ್ (9) ದಿನೇಶ್ ಕಾರ್ತಿಕ್ (0) ಮನೀಷ್ ಪಾಂಡೆ (2) ಹಾರ್ದಿಕ್ ಪಾಂಡ್ಯ (10) ಭುವನೇಶ್ವರ್ ಕುಮಾರ್ (0) ಕುಲ್ದೀಪ್ ಯಾದವ್(19) ಜಸ್ಪ್ರೀಪ್ ಭೂಮ್ರಾ (0) ಯಜುವೇಂದ್ರ ಚಾಹಲ್(0) ರನ್ ಗಳನ್ನು ಗಳಿಸಿದ್ದಾರೆ.
ಲಂಕಾ ಪರ ಅತ್ಯುತ್ತಮ ಬೌಲಿಂಗ್ ಮಾಡಿರುವ ಸುರಂಗ ಲಕ್ಮಲ್ 13 ರನ್ ನೀಡಿ 4ವಿಕೆಟ್ ತೆಗೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


