ಮೊಹಾಲಿ 2ನೇ ಏಕದಿನ ಪಂದ್ಯದ ಬಳಿಕ 'ಧೋನಿ' ನಿವೃತ್ತಿ!
ಪ್ರಸ್ತುತ ಟೀಂ ಇಂಡಿಯಾದ ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿದ್ದು ಆ ನಂತರ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ...

Published On :
ಮೊಹಾಲಿ: ಪ್ರಸ್ತುತ ಟೀಂ ಇಂಡಿಯಾದ ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿದ್ದು ಆ ನಂತರ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಏಕದಿನ ಸರಣಿಯ 2ನೇ ಪಂದ್ಯ ಮೊಹಾಲಿಯಲ್ಲಿ ನಡೆಯುತ್ತಿದ್ದು ಈ ಪಂದ್ಯದ ಬಳಿಕ ಧೋನಿಯ ನಿವೃತ್ತಿ ಸಂಭ್ರಮವೂ ಸಾಗಲಿದೆ. ಆದರೆ ಇದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಲ್ಲ.
ಕಳೆದ 10 ವರ್ಷಗಳಿಂದ ಮೊಹಾಲಿ ಪೊಲೀಸ್ ನಲ್ಲಿ ಸೇವೆಯಲ್ಲಿರುವ ಶ್ವಾನ 'ಧೋನಿ' 2ನೇ ಏಕದಿನದ ಬಳಿಕ ಸೇವೆಯಿಂದ ನಿವೃತ್ತಿಯಾಗಿದೆ.
ಲ್ಯಾಬ್ರಡಾರ್ ತಳಿಯ ಧೋನಿ, ಮೂರು ವರ್ಷವಿರುವಾಗಲೇ ಮೊಹಾಲಿ ಪೊಲೀಸ್ ಇಲಾಖೆಗೆ ಹಲವು ಶೋಧ ಕಾರ್ಯಗಳಲ್ಲಿ ನೆರವಾಗಿದೆ. ಧೋನಿ ಜತೆ ಜಾನ್ ಹಾಗೂ ಪ್ರೀತಿ ಹೆಸರಿನ ಶ್ವಾನಗಳೂ ನಿವೃತ್ತಿಯಾಗುತ್ತಿದ್ದು ಬಳಿಕ ಇವುಗಳನ್ನು ದತ್ತು ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


