ಕ್ರಿಕೆಟ್

ಧೋನಿ ಚಾಣಾಕ್ಷ ಕೀಪರ್ ಅನ್ನುವುದಕ್ಕೆ ಮತ್ತೊಂದು ಸಾಕ್ಷಿ!

ಶ್ರೀಲಂಕಾ ಮತ್ತು ಟೀಂ ಇಂಡಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಈ ಪಂದ್ಯ ಮಾಜಿ ನಾಯಕ ಎಂಎಸ್ ಧೋನಿಗೆ 300ನೇ...

ಧೋನಿ ಚಾಣಾಕ್ಷ ಕೀಪರ್ ಅನ್ನುವುದಕ್ಕೆ ಮತ್ತೊಂದು ಸಾಕ್ಷಿ!
ಎಂಎಸ್ ಧೋನಿ
Published On :
ಶ್ರೀಲಂಕಾ ಮತ್ತು ಟೀಂ ಇಂಡಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಈ ಪಂದ್ಯ ಮಾಜಿ ನಾಯಕ ಎಂಎಸ್ ಧೋನಿಗೆ 300ನೇ ಪಂದ್ಯವಾಗಿದ್ದರೆ, ಇದೇ ಪಂದ್ಯದಲ್ಲಿ ಧೋನಿ ಓರ್ವ ಚಾಣಾಕ್ಷ ಕೀಪರ್ ಅನ್ನುವುದಕ್ಕೆ ಮತ್ತೊಂದು ಸಾಕ್ಷಿ ದೊರೆತಿದೆ. 
ಅಂಪೈರ್ ನಿರ್ಧಾರ ಪರಾಮರ್ಶೆ ವ್ಯವಸ್ಥೆ(ಡಿಆರ್ಎಸ್) ಅನ್ನು ಅಭಿಮಾನಿಗಳು ಧೋನಿ ಪರಾಮರ್ಶೆ ವ್ಯವಸ್ಥೆ ಎಂದು ಕರೆಯುವುದು ವಾಡಿಕೆಯಾಗಿದೆ. ಅಂತೆ ಲಂಕಾ ವಿರುದ್ಧದ ಪಂದ್ಯದಲ್ಲಿ ಇದು ಸಾಬೀತಾಗಿದೆ. 
ಮುಂಬೈನ ವೇಗಿ ಶಾರ್ದೂಲ್ ಠಾಕೂರ್ 4ನೇ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದರು. ಬೌಲಿಂಗ್ ಮಾಡಿದ ಠಾಕೂರ್ ಎರಡನೇ ಓವರ್ ನ ಮೂರನೇ ಎಸೆತ ವೈಡ್ ಹೋಗುತ್ತಿತ್ತು ಈ ವೇಳೆ ಲಂಕಾದ ಆಟಗಾರ ಡೆಕ್ವೆಲ್ಲಾ ಅವರು ಬ್ಯಾಕ್ ಸ್ವೀಪ್ ಮಾಡಲು ಹೋದರು. ಆಗ ಧೋನಿ ಬಿಟ್ಟರೇ ಮತ್ಯಾವ ಆಟಗಾರನು ಅಪೀಲ್ ಮಾಡಲಿಲ್ಲ. ಇನ್ನು ಸ್ಟ್ರೈಟ್ ಅಂಪೈರ್ ವೈಡ್ ಎಂದು ಘೋಷಿಸಿದರು.
ಇನ್ನು ಧೋನಿ ಕರಾರುವಕ್ಕಾಗಿ ಹೇಳುತ್ತಿದ್ದರಿಂದ ತಂಡದ ನಾಯಕ ವಿರಾಟ್ ಕೊಹ್ಲಿ ಡಿಆರ್ಎಸ್ ಗೆ ಮನವಿ ಮಾಡಿದರು. ಇದನ್ನು ಪರೀಕ್ಷಿಸಿದ ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ತಂಡದ ಎಲ್ಲಾ ಆಟಗಾರರು ಅವಾಕ್ಕಾದರು. ಅಂತೂ ಧೋನಿ ಚಾಣಾಕ್ಷ ಕೀಪರ್ ಎಂಬುವುದು ಮತ್ತೊಮ್ಮೆ ಸಾಬೀತಾದಂತಾಯಿತು. ಇನ್ನು ಈ ವಿಡಿಯೋವನ್ನು ಬಳಿಸಿಕೊಂಡು ಧೋನಿ ಅಭಿಮಾನಿಗಳು ಅವರನ್ನು ಕೊಂಡಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.