'ವೇಗದ ಚಾಲನೆ' ಪ್ರಶ್ನಿಸಿದ ಹಿರಿಯ ನಾಗರೀಕರನ್ನು ಥಳಿಸಿದ ಕ್ರಿಕೆಟಿಗ ಅಂಬಾಟಿ ರಾಯುಡು
ಟೀಂ ಇಂಡಿಯಾದ ಆಟಗಾರ ಅಂಬಾಟಿ ರಾಯುಡು ಕಾರನ್ನು ವೇಗವಾಗಿ ಚಲಾಯಿಸಿದ್ದಲ್ಲದೆ ಇನ್ನು ಪ್ರಶ್ನಿಸಿದ ಹಿರಿಯ ನಾಗರಿಕರೊಬ್ಬರಿಗೆ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ...

Published On :
ಹೈದರಾಬಾದ್: ಟೀಂ ಇಂಡಿಯಾದ ಆಟಗಾರ ಅಂಬಾಟಿ ರಾಯುಡು ಕಾರನ್ನು ವೇಗವಾಗಿ ಚಲಾಯಿಸಿದ್ದಲ್ಲದೆ ಇನ್ನು ಪ್ರಶ್ನಿಸಿದ ಹಿರಿಯ ನಾಗರಿಕರೊಬ್ಬರಿಗೆ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಗುರುವಾರ ರಾಯುಡು ಅವರು ಹೈದರಾಬಾದ್ ನಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರನ್ನು ವೇಗವಾಗಿ ಚಲಾಯಿಸಿದ್ದರಿಂದ ಹಿರಿಯ ನಾಗರಿಕರೊಬ್ಬರು ಇದನ್ನು ಪ್ರಶ್ನಿಸಿದರು. ಇದರಿಂದ ಕಾರಿನಿಂದ ಹೊರಬಂದ ಅಂಬಾಟಿ ರಾಯುಡು ಹಿರಿಯರ ಜತೆ ವಾಗ್ವಾದಕ್ಕೆ ಇಳಿದರು. ನಂತರ ಅವರ ಮೇಲೆ ಕೈ ಮಾಡಿದರು. ಕೂಡಲೇ ಸ್ಥಳದಲ್ಲಿದ್ದ ಜನರು ರಾಯುಡುವನ್ನು ತಡೆದು ಅಲ್ಲಿಂದ ತೆರಳುವಂತೆ ಸೂಚಿಸಿದರು.
ಅಂಬಾಟಿ ರಾಯುಡು ಅವರ ವರ್ತನೆಗೆ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಯುಡು ಅವರು ಹಿರಿಯ ನಾಗರಿಕರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಅಂಬಾಟಿ ರಾಯುಡು ಟೀಂ ಇಂಡಿಯಾ ಪರ 34 ಏಕದಿನ, 6 ಟಿ20 ಮತ್ತು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್ಟೀಂ ಇಂಡಿಯಾTeam IndiaAmbati Rayuduಥಳಿತslapಹಿರಿಯ ನಾಗರಿಕRash drivingsenior citizenವೇಗದ ಚಾಲನೆಅಂಬಾಟಿ ರಾಯುಡುCricke
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


