ಕ್ರಿಕೆಟ್

ಮದುವೆ ಮರು ದಿನವೇ ಮೈದಾನಕ್ಕಿಳಿದು 6 ವಿಕೆಟ್ ಕಬಳಿಸಿದ ಧನಂಜಯ

ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಗೆಲುವುದು ಸಾಧಿಸಬಹುದು. ಆದರೆ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದಾಗಿದ್ದ ಟೀಂ ಇಂಡಿಯಾಗೆ...

ಮದುವೆ ಮರು ದಿನವೇ ಮೈದಾನಕ್ಕಿಳಿದು 6 ವಿಕೆಟ್ ಕಬಳಿಸಿದ ಧನಂಜಯ
ಅಖಿಲ ಧನಂಜಯ
Published On :
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಗೆಲುವುದು ಸಾಧಿಸಬಹುದು. ಆದರೆ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದಾಗಿದ್ದ ಟೀಂ ಇಂಡಿಯಾಗೆ ಮಾರಕವಾಗಿದ್ದು ಲಂಕಾದ ಸ್ಪಿನ್ ಬೌಲರ್ ಧನಂಜಯ್. 
ಗುರುವಾರ ಪಲ್ಲೆಕೆಲೆಯಲ್ಲಿ ಎರಡನೇ ಏಕದಿನ ಪಂದ್ಯ ನಡೆದಿದ್ದು ಭಾರತ ಮೂರು ವಿಕೆಟ್ ಗಳ ಪ್ರಯಾಸ ಜಯ ಗಳಿಸಿತ್ತು. ಭಾರತ ತಂಡಕ್ಕೆ ಕಂಟಕವಾಗಿ ಕಾಡಿದ್ದು ಧನಂಜಯ. ಟೀಂ ಇಂಡಿಯಾದ ಆರಂಭಿಕ ಭದ್ರಕೋಟೆಯನ್ನು ಕೆಡವಿದ ಧನಂಜಯ್ ನಂತರ 6 ವಿಕೆಟ್ ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಅಡ್ಡ ಗೋಡೆಯಾಗಿ ನಿಂತರು. ಆದರೆ ಅತೀ ಪ್ರಯಾಸದಿಂದ ಟೀಂ ಇಂಡಿಯಾ ಜಯ ಗಳಿಸಿತ್ತು. 
ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಧನಂಜಯ ಅವರು ಮದುವೆಯಾದ ಮರು ದಿನವೇ ತಂಡವನ್ನು ಸೇರಿಕೊಂಡಿದ್ದರು. ಬುಧವಾರ ಮದುವೆಯಾಗಿದ್ದ ಧನಂಜಯ್ ಮಾರನೇ ದಿನವೇ ಪಂದ್ಯವನ್ನು ಆಡಿದ್ದು 6 ವಿಕೆಟ್ ಗಳನ್ನು ಕಬಳಿಸಿದ್ದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು ಇನ್ನು ತಮ್ಮ ಬೌಲಿಂಗ್ ಪ್ರದರ್ಶನ ಬಗ್ಗೆ ಅಖಿಲ ಧನಂಜಯ್ ಸಂತಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.