ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಲಂಕಾ 216ಕ್ಕೆ ಆಲ್ ಔಟ್
ಉತ್ತಮ ಆರಂಭದ ಹೊರತಾಗಿಯೂ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಕೇವಲ 216 ರನ್ ಗಳಿಗೆ ಆಲ್ ಔಟ್ ಆಯಿತು.

ಡಂಬುಲಾ: ಉತ್ತಮ ಆರಂಭದ ಹೊರತಾಗಿಯೂ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಕೇವಲ 216 ರನ್ ಗಳಿಗೆ ಆಲ್ ಔಟ್ ಆಯಿತು.
ಶ್ರೀಲಂಕಾದ ಡಂಬುಲಾದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಉಪುಲ್ ತರಂಗಾ ಪಡೆ ಕೇವಲ 216 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಇನ್ನಿಂಗ್ಸ್ ಆರಂಭದಲ್ಲಿ ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದ ಶ್ರೀಲಂಕಾ ದಾಂಡಿಗರು ಮೊದಲ ವಿಕೆಟ್ ಗೆ 74 ರನ್ ಸಿಡಿಸಿದರು. ಆರಂಭಿಕ ಆಟಗಾರ ಡಿಕ್ ವೆಲ್ಲಾ 64 ರನ್ ಸಿಡಿಸಿದರೆ, ಮತ್ತೊರ್ವ ಆಟಗಾರ ಗುಣ ತಿಲಕ 35 ರನ್ ಸಿಡಿಸಿದರು. ಮೊದಲ ವಿಕೆಟ್ ರೂಪದಲ್ಲಿ ಗುಣ ತಿಲಕ ಔಟ್ ಆದರಾದರೂ, 2 ವಿಕೆಟ್ ಗೆ ಜೊತೆಯಾದ ಮೆಂಡಿಸ್ ಹಾಗೂ ಡಿಕ್ ವೆಲ್ ಮತ್ತೆ ಭಾರತೀಯ ಬೌಲರ್ ಗಳನ್ನು ಕಾಡಲಾರಂಭಿಸಿದರು.
ಈ ಹಂತದಲ್ಲಿ ದಾಳಿಗಿಳಿದ ಜಾದವ್ 64 ರನ್ ಗಳಿಸಿದ್ದ ಡಿಕ್ ವೆಲ್ಲಾ ಅವರನ್ನು ಎಲ್ ಬಿ ಬಲೆಗೆ ಕೆಡವಿದರು. ಬಳಿಕ ಕ್ರೀಡಾಂಗಣದಲ್ಲಿ ಆರಂಭವಾಗಿದ್ದೇ ಲಂಕಾ ದಾಂಡಿಗರ ಪೆವಿಲಿಯನ್ ಪರೇಡ್..ಮೆಂಡಿಸ್ 36 ರನ್ ಗಳಿಸಿ ಪಟೇಲ್ ಬೌಲಿಂಗ್ ನಲ್ಲಿ ಔಟಾದರೆ, ನಾಯಕ ತರಂಗಾ 13 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದ ಆಟಗಾರ ಮ್ಯಾಥ್ಯೂಸ್ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಂತರಾದರೂ, ಅವರಿಗೆ ಲಂಕಾದ ಕೆಳ ಕ್ರಮಾಂಕದ ಆಟಗಾರರು ಉತ್ತಮ ಸಾಥ್ ನೀಡಲಿಲ್ಲ. ಕಾಪುಗಡೇರಾ 1, ಡಿಸೆಲ್ವಾ 2, ಪೆರಾರಾ 0, ಸಂದಕನ್ 5, ಮಾಲಿಂಗಾ 8 ಹಾಗೂ ಫರ್ನಾಂಡೋ 0 ಹೀಗೆ ಯಾವೊಬ್ಬ ಬಾಟ್ಸಮನ್ ಕೂಡ ಎರಡಂಕಿ ಮೊತ್ತವನ್ನೂ ದಾಟಲಿಲ್ಲ.
ಅಂತಿಮವಾಗಿ ಲಂಕಾ ಮೊತ್ತ 2016 ರನ್ ಗಳಾಗಿದ್ದಾಗ ಫರ್ನಾಂಡೋ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಲಂಕಾ ಪಡೆ ಆಲ್ ಔಟ್ ಆಗಿತ್ತು. ಆ ಮೂಲಕ ತರಂಗಾ ಪಡೆ ಭಾರತಕ್ಕೆ ಗೆಲ್ಲಲು 2017 ರನ್ ಗಳ ಗುರಿ ನೀಡಿತು.
ಭಾರತದ ಪರ ಬುಮ್ರಾ, ಜಾದವ್ ಮತ್ತು ಚಾಹಲ್ ತಲಾ 2 ವಿಕೆಟ್ ಪಡೆದರೆ, ಪಟೇಲ್ 3 ವಿಕೆಟ್ ಪಡೆದು ಮಂಚಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


