ಟೀಂ ಇಂಡಿಯಾ ವಿಶ್ವದ ನಂ. 1 ತಂಡವಾಗಿ ಮುಂದುವರಿಯುತ್ತದೆ: ಮೈಕೆಲ್ ಕ್ಲಾರ್ಕ್
ಮುಂಬರುವ ಭಾರತ ಪ್ರವಾಸ ಹಿನ್ನೆಲೆ ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ತಂಡವನ್ನು ಪ್ರಕಟಿಸಿದೆ. ಈ ಮಧ್ಯೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕಾರ್ಕ್...

Published On :
ಮುಂಬೈ: ಮುಂಬರುವ ಭಾರತ ಪ್ರವಾಸ ಹಿನ್ನೆಲೆ ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ತಂಡವನ್ನು ಪ್ರಕಟಿಸಿದೆ. ಈ ಮಧ್ಯೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕಾರ್ಕ್ ತಂಡದ ಆಟಗಾರರಿಗೆ ಭಾರತದ ನೆಲದಲ್ಲಿ ವಿರಾಟ್ ಕೊಹ್ಲಿ ಪಡೆಯನ್ನು ಮಣಿಸುವುದು ತುಂಬಾನೆ ಕಷ್ಟ ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಗಿಂತ ಏಕದಿನ ಪಂದ್ಯ ವಿಭಿನ್ನವಾಗಿದೆ. ಆಗಾಗಿ ಇಲ್ಲಿ ವಿಕೆಟ್ ಗಳನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡಬೇಕು. ನೀವು ಕೆಲವು ಮನರಂಜನೆಯ ಏಕದಿನ ಕ್ರಿಕೆಟ್ ಅನ್ನು ನೋಡುತ್ತೀರಿ. ಆಸ್ಟ್ರೇಲಿಯಾ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಭಾರತದ ನೆಲದಲ್ಲಿ ಟೀಂ ಇಂಡಿಯಾ ವಿರುದ್ಧ ಪಂದ್ಯವನ್ನು ಗೆಲ್ಲುವುದು ತುಂಬಾನೆ ಕಠಿಣ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ ಒಂಬತ್ತು ಟೆಸ್ಟ್ ಸರಣಿಗಳನ್ನು ಗೆದ್ದಿದೆ. ಇನ್ನು ಶ್ರೀಲಂಕಾ ನೆಲದಲ್ಲಿ ಆತಿಥೇಯ ತಂಡವನ್ನು 3-0 ಅಂತರದಿಂದ ವೈಟ್ ವಾಶ್ ಮಾಡಿದ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾನು ತಂಡದಲ್ಲಿ ಆಡಿಲ್ಲ. ಹೀಗಾಗಿ ನಾನು ಪ್ರಸ್ತುತ ತಂಡದಲ್ಲಿನ ಆಟಗಾರರ ವಿರುದ್ಧ ಆಡಿಲ್ಲ. ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು ತಮ್ಮ ನೆಲದಲ್ಲಿ ಗೆಲ್ಲುವ ಫೇವರೆಟ್ ತಂಡವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaVirat Kohliವಿರಾಟ್ ಕೊಹ್ಲಿಮೈಕೆಲ್ ಕ್ಲಾರ್ಕ್Michael Clark
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


