ಕ್ರಿಕೆಟ್: ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ಗೆದ್ದ ಭಾರತಕ್ಕೆ ಭರ್ಜರಿ ಸರಣಿ ಜಯ
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಲಂಕಾ ತಂಡವನ್ನು ವೈಟ್ ವಾಷ್ ಮಾಡಿದೆ...

Published On :
ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಲಂಕಾ ತಂಡವನ್ನು ವೈಟ್ ವಾಷ್ ಮಾಡಿದೆ.
ಪಲ್ಲೆಕಿಲೆ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 171 ರನ್ ಗಳಿಂದ ಜಯ ಗಳಿಸಿದೆ. ಆ ಮೂಲಕ ವಿದೇಶಿ ನೆಲದಲ್ಲಿ ಭಾರತ ತನ್ನ 82 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 487 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಬ್ಯಾಟಿಂಗ್ ವೈಫಲ್ಯದಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 135ಕ್ಕೆ ಆಲೌಟ್ ಆಗಿತ್ತು. ಇದರೊಂದಿಗೆ ಫಾಲೋ ಆನ್ ಗೆ ಒಳಪಟ್ಟ ಶ್ರೀಲಂಕಾ ಮತ್ತೆ ದ್ವಿತೀಯ ಇನ್ನಿಂಗ್ಸ್ ಪ್ರಾರಂಭಿಸಿತ್ತು. ಇಲ್ಲಿಯೂ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು 181 ರನ್ ಗಳಿಗೆ ಸರ್ವಪತನ ಕಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಶಿಖರ್ ಧವನ್ 119, ರಾಹುಲ್ 85, ಅಜಿಂಕ್ಯಾ ರಹಾನೆ 16, ಚೇತೇಶ್ವರ ಪೂಜಾರ 8, ವಿರಾಟ್ ಕೊಹ್ಲಿ 42, ಹಾರ್ದಿಕ್ ಪಾಂಡ್ಯಾ 108, ಆರ್.ಅಶ್ವಿನ್ 31, ಕುಲದೀಪ್ ಯಾದವ್ 26, ವೃದ್ಧಿಮಾನ್ ಸಾಹ 16, ಮೊಹಮ್ಮದ್ ಶಮಿ 8, ಉಮೇಶ್ ಯಾದವ್ ಔಟಾಗದೆ 3 ರನ್ ದಾಖಲಿಸಿದರು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ಪರ ಕರುಣರತ್ನೆ 16, ಚಾಂಡಿಮಲ್ 36, ಮ್ಯಾಥ್ಯೂಸ್ 35 ಮತ್ತು ಡಿಕ್ವೇಲ್ಲಾ 41 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ ಆರ್ ಅಶ್ವಿನ್ 4, ಮೊಹಮ್ಮದ್ ಶಮಿ 3, ಉಮೇಶ್ ಯಾದವ್ 2 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaSri Lankaಶ್ರೀಲಂಕಾShikhar Dhawanಶಿಖರ್ ಧವನ್Pallekele Testಪಲ್ಲೆಕಿಲೆ ಟೆಸ್ಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


