ಕ್ಯಾಪ್ಟನ್ ಕೊಹ್ಲಿ ಮುಡಿಗೆ ಮತ್ತೊಂದು ದಾಖಲೆ, ಸ್ಟೀವ್ ವಾ ದಾಖಲೆ ಪತನ!
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆಯ ಗರಿ ಮುಡಿಗೇರಿದ್ದು, ಲಂಕಾ ನೆಲದಲ್ಲಿ ಸತತ ಎರಡು ಟೆಸ್ಟ್ ಸರಣಿ ಗೆದ್ದ ಮೊದಲ ಭಾರತ ತಂಡದ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕೊಲಂಬೋ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆಯ ಗರಿ ಮುಡಿಗೇರಿದ್ದು, ಲಂಕಾ ನೆಲದಲ್ಲಿ ಸತತ ಎರಡು ಟೆಸ್ಟ್ ಸರಣಿ ಗೆದ್ದ ಮೊದಲ ಭಾರತ ತಂಡದ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
1993ರಲ್ಲಿ ಭಾರತ ತಂಡ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಬಳಿಕ 2015ರಲ್ಲಿ ಇದೇ ಕೊಹ್ಲಿ ಪಡೆ ಲಂಕಾ ತಂಡದ ವಿರುದ್ಧ ಟೆಸ್ಟ್ ಸರಣಿ ಜಯಿಸಿತ್ತು. ಇನ್ನು ಈ ಬಾರಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಲಂಕಾ ವಿರುದ್ಧ 2-0 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅಂತೆಯೇ ಲಂಕಾ ನೆಲದಲ್ಲಿ ಕೊಹ್ಲಿ ಪಡೆ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು ಕೊಲಂಬೋದಲ್ಲಿ ನಡೆದ ಸತತ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡ ಎಂಬ ಕೀರ್ತಿಗೂ ಟೀಂ ಇಂಡಿಯಾ ಭಾಜನವಾಗಿದೆ.
ನಾಯಕ ಕೊಹ್ಲಿ ಪಾಲಿಗೆ 8ನೇ ಟೆಸ್ಟ್ ಸರಣಿ ಜಯ
ಇನ್ನು ನಾಯಕ ಕೊಹ್ಲಿ ಪಾಲಿಗೆ ಇದು 8ನೇ ಟೆಸ್ಟ್ ಸರಣಿ ಜಯವಾಗಿದ್ದು, ಇಂಗ್ಲೆಂಡ್ ತಂಡ 1884ರಿಂದ 1892ರ ಅವಧಿಯಲ್ಲಿ 9 ಟೆಸ್ಟ್ ಸರಣಿಯನ್ನು ಜಯಿಸಿತ್ತು. ಇನ್ನು 2005 ಮತ್ತು 2008ರ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ಕೂಡ 9 ಟೆಸ್ಟ್ ಪಂದ್ಯಗಳನ್ನು ಜಯಿಸಿತ್ತು.
ಸ್ಟೀವ್ ವಾ ದಾಖಲೆ ಪತನ
ಇನ್ನು ಈ ಟೆಸ್ಟ್ ಸರಣಿ ಜಯದೊಂದಿಗೆ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಸ್ಟೀವ್ ವಾ ಅವರ ದಾಖಲೆಯನ್ನು ಮುರಿದಿದ್ದು, ಸ್ಟೀವ್ ವಾ ನೇತೃತ್ವದಲ್ಲಿ ಆಸಿಸ್ ಪಡೆ 7 ಸರಣಿಗಳನ್ನು ಜಯಿಸಿತ್ತು. ಶ್ರೀಲಂಕಾ ಟೆಸ್ಟ್ ಸರಣಿ ಜಯ ಕೊಹ್ಲಿ ಪಾಲಿಗೆ 8ನೇ ಸರಣಿ ಜಯವಾಗಿದೆ.
ರಿಕ್ಕಿ ಪಾಟಿಂಗ್ ದಾಖಲೆ ಬೆನ್ನು ಹತ್ತಿದ ಭಾರತದ ರನ್ ಮೆಷಿನ್
ಅಂತೆಯೇ ವಿರಾಟ್ ಕೊಹ್ಲಿ ಮತ್ತದೇ ಆಸ್ಟ್ರೇಲಿಯಾ ತಂಡದ ದಾಖಲೆ ಹಿಂದೆ ಬಿದ್ದಿದ್ದು, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಟಿಂಗ್ ಹೆಸರಿನಲ್ಲಿರುವ ದಾಖಲೆ ಹಿಂದಿಕ್ಕಲು ಕೊಹ್ಲಿ ಇನ್ನು ಕೇವಲ 1 ಟೆಸ್ಟ್ ಸರಣಿ ಜಯದ ಅವಶ್ಯಕತೆ ಇದೆ. ರಿಕ್ಕಿ ಪಾಟಿಂಗ್ ಒಟ್ಟು 9 ಟೆಸ್ಟ್ ಸರಣಿ ಜಯಿಸಿದ್ದಾರೆ.
ಇನ್ನು ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಒಟ್ಟು 28 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ಪೈಕಿ 18ರಲ್ಲಿ ಜಯಗಳಿಸಿದೆ. 3 ಪಂದ್ಯವನ್ನು ಸೋತಿದ್ದು, 6 ಪಂದ್ಯಗಳು ಡ್ರಾನಲ್ಲಿ ಮುಕ್ತಾಯವಾಗಿದೆ. ಸೌರವ್ ಗಂಗೂಲಿ 21 ಪಂದ್ಯಗಳನ್ನು ಜಯಿಸಿಕೊಟ್ಟಿದ್ದು, ಎಂಎಸ್ ಧೋನಿ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


