ಕ್ರಿಕೆಟ್

ಐಪಿಎಲ್‌ನಲ್ಲಿ ಖುಲಾಯಿಸದ ಅದೃಷ್ಟ: ಚಾಂಪಿಯನ್ಸ್ ಆಗುವ ಆರ್ಸಿಬಿ ಕನಸು ನನಸಾಗುವ ಆಸೆ ಕ್ಷೀಣ!

ಐಪಿಎಲ್ 10ನೇ ಆವೃತ್ತಿಯ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಗುಜರಾತ್ ಲಯನ್ಸ್ ವಿರುದ್ಧ ಸೋಲು ಕಂಡಿದ್ದು...

ಐಪಿಎಲ್‌ನಲ್ಲಿ ಖುಲಾಯಿಸದ ಅದೃಷ್ಟ: ಚಾಂಪಿಯನ್ಸ್ ಆಗುವ ಆರ್ಸಿಬಿ ಕನಸು ನನಸಾಗುವ ಆಸೆ ಕ್ಷೀಣ!
ರಾಯಲ್ ಚಾಲೆಂಜರ್ಸ್ ಬೆಂಗಳೂರು
Published On :
ಬೆಂಗಳೂರು: ಐಪಿಎಲ್ 10ನೇ ಆವೃತ್ತಿಯ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಗುಜರಾತ್ ಲಯನ್ಸ್ ವಿರುದ್ಧ ಸೋಲು ಕಂಡಿದ್ದು ಪ್ಲೇ-ಆಫ್ ಕನಸು ಬಹುತೇಕ ಭಗ್ನಗೊಂಡಿದೆ. 
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಆಟಗಾರರು ಭರ್ಜರಿ ಆಟವಾಡಿದರು. ಪರಿಣಾಮ ಆರ್ಸಿಬಿ ವಿರುದ್ಧ 7 ವಿಕೆಟ್ ಗಳ ಜಯ ಸಾಧಿಸಿದ್ದಾರೆ. 
ಸದ್ಯ ಟೂರ್ನಿಯಲ್ಲಿ 9 ಪಂದ್ಯಗಳ ಪೈಕಿ 2 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ 5 ಅಂಕಗಳನ್ನು ಪಡೆದಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 
ವಿರಾಟ್ ಕೊಹ್ಲಿ ಪಡೆ ಉಳಿದಿರುವ ಐದು ಪಂದ್ಯಗಳನ್ನು ಗೆದ್ದರೂ ಪ್ಲೇ-ಆಫ್ ಸ್ಥಾನಕ್ಕೇರುವುದು ಕಷ್ಟಸಾಧ್ಯ. ತಂಡದ ನೆಟ್ ರನ್ ರೇಟ್ ತೀರಾ ಕಳಪೆಯಾಗಿದೆ. ಆರ್ಸಿಬಿಗೆ ಪುಣೆ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಪಂದ್ಯಗಳು ಬಾಕಿ ಇವೆ. ಇದರಲ್ಲಿ ಎರಡು ಪಂದ್ಯಗಳು ತವರಿನಲ್ಲಿ ನಡೆದರೆ ಇನ್ನುಳಿದ ಮೂರು ಪಂದ್ಯ ತವರಿನಾಚೆಯ ಪಂದ್ಯಗಳಾಗಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.