ಆರ್ ಸಿಬಿಯ 49 ರನ್ ಐಪಿಎಲ್ ಇತಿಹಾಸದಲ್ಲೇ ತಂಡವೊಂದರ ಕಳಪೆ ಮೊತ್ತ!
ಕೋಲ್ಕತಾದ ಈಡನೇ ಗಾರ್ಡನ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗಳಿಸಿದ 49 ರನ್ ಗಳು ಐಪಿಎಲ್ ಇತಿಹಾಸದಲ್ಲೇ ತಂಡವೊಂದರ ಕಳಪೆ ಮೊತ್ತವಾಗಿ ದಾಖಲಾಗಿದೆ.

Published On :
ಕೋಲ್ಕತಾ: ಕೋಲ್ಕತಾದ ಈಡನೇ ಗಾರ್ಡನ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗಳಿಸಿದ 49 ರನ್ ಗಳು ಐಪಿಎಲ್ ಇತಿಹಾಸದಲ್ಲೇ ತಂಡವೊಂದರ ಕಳಪೆ ಮೊತ್ತವಾಗಿ ದಾಖಲಾಗಿದೆ.
ಇಂದು ಕೋಲ್ಕತಾದ ಈಡನಾ ಗಾರ್ಡನ್ ಮೈದಾನದಲ್ಲಿ ಆರ್ ಸಿಬಿ ತಂಡ ಕೇವಲ 9.4 ಓವರ್ ಗಳಲ್ಲಿ 49 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಐಪಿಎಲ್ ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲ್ ಔಟ್ ಆದ ತಂಡವಾಯಿತು. ಈ ಹಿಂದೆ 2009ರಲ್ಲಿ ಇದೇ ಬೆಂಗಳೂರು ತಂಡದ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ ಕೇವಲ 58 ರನ್ ಗಳಿಗೆ ಆಲ್ ಔಟ್ ಆಗಿತ್ತು. ಇದು ಈ ವರೆಗಿನ ಐಪಿಎಲ್ ಟೂರ್ನಿಯ ಅತ್ಯಂತ ಕಳಪೆ ಮೊತ್ತವಾಗಿ ದಾಖಲಾಗಿತ್ತು. ಇದಕ್ಕೂ ಮೊದಲು 2008ರಲ್ಲಿ ಇಂದು ಆರ್ ಸಿಬಿ ಸೋಲಿಸಿದ ಕೋಲ್ಕತಾ ತಂಡ ಮುಂಬೈ ವಿರುದ್ಧ 67 ರನ್ ಗಳಿಗೆ ಆಲ್ ಔಟ್ ಆಗಿತ್ತು. ಈ ಹಿಂದೆ 2014ರಲ್ಲಿ ರಾಯಲ್ ಚಾಲೆಂಜರ್ಸ್ ತಂಡ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ 70 ರನ್ ಗಳಿಗೆ ಆಲ್ ಔಟ್ ಆಗಿತ್ತು. ಇದು ಆರ್ ಸಿಬಿಯ ಅತ್ಯಂತ ಕಡಿಮೆ ಮೊತ್ತವಾಗಿತ್ತು.
ಆದರೆ ಇಂದಿನ ಪಂದ್ಯದ ಕಳಪೆ ಬ್ಯಾಟಿಂಗ್ ಮೂಲಕ ಆರ್ ಸಿಬಿ ತನ್ನ ಈ ಹಿಂದಿನ ದಾಖಲೆಯನ್ನು ಅಳಿಸಿ ಅತ್ಯಂತ ಕಳಪೆ ಮೊತ್ತ ದಾಖಲಿಸಿದ ದಾಖಲೆ ಬರೆದಿದೆ.
ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ 10 ಬ್ಯಾಟ್ಸಮನ್ ಗಳ ಪೈಕಿ ಮೂರು ಬ್ಯಾಟ್ಸಮನ್ ಗಳು ಶೂನ್ಯ ಸಂಪಾದನೆ ಮಾಡಿದ್ದರೆ, ಉಳಿದ 7 ಮಂದಿ ಬ್ಯಾಟ್ಸಮನ್ ಗಳ ರನ್ ಗಳಿಕೆ ಎರಡಂಕಿ ದಾಟಿಲ್ಲ. ಇಡೀ ತಂಡದ ಮೊತ್ತ ಅರ್ಧಶತಕ ಕೂಡ ದಾಟಿಲ್ಲ. ಕೋಲ್ಕತಾ ಅಲ್ಪ ಮೊತ್ತಕ್ಕೆ ಆಲ್ ಔಟ್ ಆದಾಗಲೇ ಪಂದ್ಯ ಗೆದ್ದೇ ಬಿಟ್ಟೆವು ಎಂದು ಬೀಗಿದ ಆರ್ ಸಿಬಿ ಆಟಗಾರರಿಗೆ ಇಂದಿನ ಪಂದ್ಯ ನಿಜ್ಕಕೂ ಪಾಠದಂತಿದೆ.\
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Kolkataಕೋಲ್ಕತಾKolkata Knight Ridersರಾಯಲ್ ಚಾಲೆಂಜರ್ಸ್ ಬೆಂಗಳೂರುಕೋಲ್ಕತಾ ನೈಟ್ ರೈಡರ್ಸ್Royal Challengers Bengaluruಐಪಿಎಲ್ 2017IPL 2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


