ಕ್ರಿಕೆಟ್

ಅಲ್ಪ ಗುರಿಯ ಹೊರತಾಗಿಯೂ ಕೋಲ್ಕತಾ ವಿರುದ್ಧ ಹೀನಾಯ ಸೋಲು ಕಂಡ ಬೆಂಗಳೂರು!

ಅಲ್ಪ ಗುರಿಯ ಹೊರತಾಗಿಯೂ ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ತಂಡದ ವಿರುದ್ಧ ಹೀನಾಯ ಸೋಲು ಕಂಡಿದೆ.

ಅಲ್ಪ ಗುರಿಯ ಹೊರತಾಗಿಯೂ ಕೋಲ್ಕತಾ ವಿರುದ್ಧ ಹೀನಾಯ ಸೋಲು ಕಂಡ ಬೆಂಗಳೂರು!
ಕ್ರಿಕ್ ಇನ್ಫೋ ಚಿತ್ರ
Published On :
ಕೋಲ್ಕತಾ: ಅಲ್ಪ ಗುರಿಯ ಹೊರತಾಗಿಯೂ ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ತಂಡದ ವಿರುದ್ಧ ಹೀನಾಯ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡ ಕೋಲ್ಕತಾ ತಂಡವನ್ನು ಕೇವಲ 131 ರನ್ ಗಳಿಗೆ ಆಲ್ ಔಟ್ ಮಾಡಿತು. ಬಳಿಕ 132 ರನ್ ಗಳ ಗುರಿ ಬೆನ್ನು ಹತ್ತಿದ ಕೊಹ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೇವಲ 44 ರನ್ ಗಳಿಗೆ ತಂಡದ ಬರೊಬ್ಬರಿ 7 ವಿಕೆಟ್ ಪತನವಾಗಿದ್ದು ಆರ್ ಸಿಬಿ ಕಳಪೆ ಬ್ಯಾಟಿಂಗ್ ಗೆ ಹಿಡಿದ ಕೈಗನ್ನಡಿಯಾಗಿದೆ.
ತಂಡದ ಪ್ರಮುಖ 7 ಬ್ಯಾಟ್ಸಮನ್ ಗಳು ಎರಡಂಕಿ ಕೂಡ ದಾಟಲಿಲ್ಲ. ಕ್ರಿಸ್ ಗೇಯ್ಲ್ 7, ನಾಯಕ ಕೊಹ್ಲಿ ಶೂನ್ಯ, ಮನ್ ದೀಪ್ ಸಿಂಗ್ 1, ಎಬಿಡಿವಿಲಿಯರ್ಸ್ 8, ಜಾದವ್ 9, ಬಿನ್ನಿ 8, ನೇಗಿ 2, ಬದ್ರೀ ಶೂನ್ಯ ಹೀಗೆ ಆರ್ ಸಿಬಿ ತಂಡದ ಯಾವೊಬ್ಬ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ. ಮತ್ತೊಂದೆಡೆ ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ ಕೋಲ್ಕತಾ ತಂಡದ ಕಾಲ್ಟರ್ ನೈಲ್, ಗ್ರ್ಯಾಂಡ್ ಹೋಮ್ ಮತ್ತು ವೋಕ್ಸ್ ತಲಾ 3 ವಿಕೆಟ್ ಕಬಳಿಸಿ ಆರ್ ಸಿಬಿ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಯಾದವ್ 1 ವಿಕೆಟ್ ಪಡೆದರು. 
ಅಂತಿಮವಾಗಿ ಆರ್ ಬಿಸಿ ತಂಡ ಕೇವಲ 49 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಆರ್ ಸಿಬಿ ತಂಡ ಬರೊಬ್ಬರಿ 82 ರನ್ ಗಳ ಹೀನಾಯ ಸೋಲು ಕಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.