ಐಪಿಎಲ್ 2017: ಗುಜರಾತ್ ಲಯನ್ಸ್ ಗೆ ಗೆಲ್ಲಲು 189 ರನ್ ಗಳ ಟಾರ್ಗೆಟ್!
ಐಪಿಎಲ್ ಟೂರ್ನಿ ನಿಮಿತ್ತ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 188 ರನ್ ಗಳ ಕಲೆಹಾಕಿದ್ದು, ಗುಜರಾತ್ ಗೆ 189 ರನ್ ಗಳ ಗುರಿ ನೀಡಿದೆ.

ರಾಜ್ ಕೋಟ್: ಐಪಿಎಲ್ ಟೂರ್ನಿ ನಿಮಿತ್ತ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 188 ರನ್ ಗಳ ಕಲೆಹಾಕಿದ್ದು, ಗುಜರಾತ್ ಗೆ 189 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಬೌಲಿಂಗ್ ಮಾಡುವ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ ಆರಂಭಿಕ ಆಘಾತ ಎದುರಿತು. ಕೇವಲ 2 ರನ್ ಗಳಿಗೆ ವೋಹ್ರಾ ಔಟ್ ಆದರು. ಆದರೆ ಬಳಿಕ ಆಮ್ಲಾ ಜೊತೆ ಗೂಡಿ ಮಾರ್ಶ್ ಉತ್ತಮ ಬ್ಯಾಟಿಂಗ್ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಮೇಲಕ್ಕೆ ಎತ್ತಿದರು. ಬರೋಬ್ಬರಿ 70 ರನ್ ಗಳ ಜೊತೆಯಾಟವಾಡಿದ ಈ ಜೋಡಿ 10ನೇ ಓವರ್ ನಲ್ಲಿ ಬೇರ್ಪಟ್ಟಿತು. 30 ರನ್ ಗಳಿಸಿದ್ದ ಮಾರ್ಶ್ ಟೈ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಬಂದ ಮ್ಯಾಕ್ಸ್ ವೆಲ್ ಕೂಡ ಉತ್ತಮ ರನ್ ಕಲೆ ಹಾಕಿದರು. ಆಮ್ಲಾ ಮತ್ತು ಮ್ಯಾಕ್ಸ್ ವೆಲ್ ಜೋಡಿ 47 ರನ್ ಗಳಿಸಿ ಬೇರ್ಪಟ್ಟಿತು. 65 ರನ್ ಗಳಿಸಿದ್ದ ಆಮ್ಲಾ ಅಗರ್ವಾಲ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಬಳಿಕ 31 ರನ್ ಗಳಿಸಿದ್ದ ಮ್ಯಾಕ್ಸ್ ವೆಲ್ ಕೂಡ ಜಡೇಜಾ ಬೌಲಿಂಗ್ ನಲ್ಲಿ ಕ್ಯಾಚಿತ್ತು ಹೊರ ನಡೆದರು.
ಬಳಿಕ ಬಂದ ಸ್ಟಾಯಿನಿಸ್ ಕೇವಲ 7 ರನ್ ಗಳಿಸಿ ಔಟ್ ಆದರೆ, ಪಟೇಲ್ 34 ರನ್ ಗಳಿಸಿ ಸ್ಮಿತ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಅಂತಿಮವಾಗಿ 10 ರನ್ ಗಳಿಸಿದ್ದ ಸಾಹಾ ರನ್ ಔಟ್ ಗೆ ಬಲಿಯಾದರು. ಆ ಮೂಲಕ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ, ಗುಜರಾತ್ ಗೆ 189 ರನ್ ಗಳ ಸವಾಲಿನ ಗುರಿ ನೀಡಿದೆ.
ಗುಜರಾತ್ ಪರ ಟೈ 2 ಮತ್ತು ಅಗರ್ವಾಲ್, ಸಿಂಗ್, ಜಡೇಜಾ ಮತ್ತು ಸ್ಮಿತ್ ತಲಾ ಒಂದು ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


