ಕ್ರಿಸ್ ಗೇಯ್ಲ್ ರ ಹೊಸ ಸ್ಟೈಲ್, ಗಂಗ್ನಮ್ ಸ್ಟೈಲ್ ಹೋಯ್ತು ಸಾಲ್ಟ್ ಬೇ ಬಂತು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ 10ನೇ ಆವೃತ್ತಿಯಲ್ಲಿ ಮಂಕಾಗಿದ್ದರು. ಆದರೆ ರಾಜ್ ಕೋರ್ಟ್ ನಲ್ಲಿ ಗುಜರಾತ್...

Published On :
ರಾಜ್ ಕೋಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ 10ನೇ ಆವೃತ್ತಿಯಲ್ಲಿ ಮಂಕಾಗಿದ್ದರು. ಆದರೆ ರಾಜ್ ಕೋರ್ಟ್ ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 23 ಎಸೆತಗಳಲ್ಲಿ 50 ರನ್ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಅವರ ಹೊಸದೊಂದು ಸ್ಟೈಲ್ ಅನ್ನು ಪರಿಚಯಿಸಿದ್ದಾರೆ.
ಗೇಯ್ಲ್ ಸಾಧನೆಯ ಖುಷಿಯನ್ನು ಗಂಗ್ನಮ್ ಡ್ಯಾನ್ಸ್ ಮೂಲಕ ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ ಅವರು ಸ್ಟೈಲ್ ಬದಲಿಸಿದ್ದಾರೆ. ಅದೇ ಸಾಲ್ಟ್ ಬೇ ಸ್ಟೈಲ್. ಕ್ರೀಡಾ ಕ್ಷೇತ್ರದಲ್ಲಿ ಇದೀಗ ಸಾಲ್ಟ್ ಬೇ ಸ್ಟೈಲ್ ಹೆಚ್ಚು ಪರಿಚಿತವಾಗಿದೆ. ಕೆಲ ದಿನಗಳ ಹಿಂದೆ ಆರ್ಸೆನಲ್ ಫುಟ್ಬಾಲಿಗ ಡ್ಯಾನಿ ಗೋಲು ಹೊಡೆದ ಸಂಭ್ರಮವನ್ನು ಇದೇ ರೀತಿ ಆಚರಿಸಿದ್ದರು.
ಸಾಲ್ಟ್ ಬೇ ಸ್ಟೈಲ್ ಹುಟ್ಟಿಕೊಂಡಿದ್ದು ಟರ್ಕಿ ರೆಸ್ಟೋರೆಂಟ್ ವೊಂದರ ಬಾಣಸಿಗ ನಸ್ರತ್ ಗೋಕ್ಸ್ ಎಂಬಾತನಿಂದ. ನಸ್ರತ್ ಒಟ್ಟೋಮನ್ ಸ್ಟಿಕ್ ಎಂಬ ವಿಡಿಯೋ ಮೂಲಕ ಅಂತಾರ್ಜಾಲದಲ್ಲಿ ಈ ಶೈಲಿ ಪರಿಚಯಿಸಿದ್ದ ಬೇಯಿಸಿದ ಮಾಂಸದ ಮೇಲೆ ಉಪ್ಪು ಸುರಿಯುವ ಶೈಲಿಯ ವಿಡಿಯೋ ಈಗ ಅಂತಾರ್ಜಾಲದಲ್ಲಿ ಭಾರೀ ಜನಪ್ರಿಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


