ಕ್ರಿಕೆಟ್

ಭರ್ಜರಿ ಆಟದ ಮೂಲಕ ಫಾರ್ಮ್ ಗೆ ಮರಳಿದ ಗೇಯ್ಲ್; ಆರ್ ಸಿಬಿ ಬೃಹತ್ ಮೊತ್ತ

ರಾಜಸ್ತಾನದ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಐಪಿಎಲ್ ಸೀಸನ್ 10ರ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಲಯನ್ಸ್ ತಂಡಕ್ಕೆ ಬೃಹತ್ ಗುರಿ ನೀಡಿದೆ.

ಭರ್ಜರಿ ಆಟದ ಮೂಲಕ ಫಾರ್ಮ್ ಗೆ ಮರಳಿದ ಗೇಯ್ಲ್; ಆರ್ ಸಿಬಿ ಬೃಹತ್ ಮೊತ್ತ
ಕ್ರಿಕ್ ಇನ್ಫೋ ಚಿತ್ರ
Published On :
ರಾಜ್ ಕೋಟ್: ರಾಜಸ್ತಾನದ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಐಪಿಎಲ್ ಸೀಸನ್ 10ರ  20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಲಯನ್ಸ್ ತಂಡಕ್ಕೆ 214 ರನ್ ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಬೌಲಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡದ ಲೆಕ್ಕಾಚಾರಗಳನ್ನೆಲ್ಲಾ ಆರ್ ಸಿಬಿ ದೈತ್ಯ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಛಿದ್ರ ಮಾಡಿದ್ದು, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ. ಆರಂಭದಿಂದಲೂ ಗುಜರಾತ್ ಲಯನ್ಸ್ ಬೌಲರ್ ಗಳ  ಮೇಲೆ ಸವಾರಿ ಮಾಡಿದ ಗೇಯ್ಲ್, ಕೇವಲ 38 ಎಸೆತಗಳಲ್ಲಿ 77 ರನ್ ಸಿಡಿಸಿದರು. ಗೇಯ್ಲ್ ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಸಾಥ್ ನೀಡಿದರು.
ಈ ಜೋಡಿ ಮೊದಲ ವಿಕೆಟ್ ಗೆ ಭರ್ಜರಿ 122 ರನ್ ಗಳ ಜೊತೆಯಾಟ ನೀಡಿತು. ಆದರೆ 77 ರನ್ ಗಳಿಸಿದ್ದ ಗೇಯ್ಲ್ ಬಸಿಲ್ ಥಾಂಪಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಬಳಿಕ ಟಿಎಂಹೆಡ್ ಕೊಹ್ಲಿ ಜೊತೆ ಗೂಡಿ ಆರ್ ಸಿಬಿ ರನ್ ಗಳಿಕೆಗೆ ವೇಗ ನೀಡಿದರು. ಇದೇ ಹೊತ್ತಿನಲ್ಲೇ ನಾಯಕ  ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಬಳಿಕ 62 ರನ್ ಗಳಿಸಿದ್ದ ಕೊಹ್ಲಿ ಕುಲಕರ್ಣಿ ಬೌಲಿಂಗ್ ನಲ್ಲಿ ಸ್ಮಿತ್ ಗೆ ಕ್ಯಾಚಿತ್ತು ಹೊರ ನಡೆದರು. ಬಳಿಕ ಜೊತೆಗೂಡಿದ ಹೆಡ್ (30 ರನ್) ಹಾಗೂ ಜಾದವ್ (38 ರನ್) ಆರ್ ಸಿಬಿ ರನ್ ಗಳಿಕೆಯನ್ನು 213ಕ್ಕೆ ಏರಿಕೆ ಮಾಡಿದರು.
ಆಂತಿಮವಾಗಿ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 213 ರನ್ ಗಳನ್ನು ಪೇರಿಸಿತು. ಆ ಮೂಲಕ ಗುಜರಾತ್ ತಂಡಕ್ಕೆ ಗೆಲ್ಲಲು 214 ರನ್ ಗಳ ಬೃಹತ್ ಗುರಿ ನೀಡಿತು.
ಪ್ರಸಕ್ತ ಸಾಲಿನ ಸರಣಿಯಲ್ಲಿ 5 ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇಂದಿನ ಪಂದ್ಯ ಬೆಂಗಳೂರು ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಾತಾಗಿದೆ. ಅತ್ತ ಗುಜರಾತ್ ತಂಡ ಕೂಡ 4 ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಮಾತ್ರ ಗೆಲುವು ಸಾಧಿಸಿ  3 ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಗುಜರಾತ್ ತಂಡಕ್ಕೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.