ಐಪಿಎಲ್-10: ಮುಂಬೈಗೆ ಗೆಲ್ಲಲು 177 ರನ್ ಗಳ ಸವಾಲಿನ ಗುರಿ ನೀಡಿದ ಗುಜರಾತ್ ಲಯನ್ಸ್
ಸ್ಫೋಟಕ ಬ್ಯಾಟ್ಸಮನ್ ಮೆಕ್ಕಲಮ್ ಮತ್ತು ಕಾರ್ತಿಕ್ ಅವರ ಅಜೇಯ ಆಟದ ಪರಿಣಾಮ ಮುಂಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 177 ರನ್ ಗಳ ಸವಾಲಿನ ಗುರಿಯನ್ನು ನೀಡಿದೆ.

ಮುಂಬೈ: ಸ್ಫೋಟಕ ಬ್ಯಾಟ್ಸಮನ್ ಮೆಕ್ಕಲಮ್ ಮತ್ತು ಕಾರ್ತಿಕ್ ಅವರ ಅಜೇಯ ಆಟದ ಪರಿಣಾಮ ಮುಂಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 177 ರನ್ ಗಳ ಸವಾಲಿನ ಗುರಿಯನ್ನು ನೀಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಲಯನ್ಸ್ ತಂಡ ಮೆಕ್ಕಲಮ್ ಸ್ಫೋಟಕ ಬ್ಯಾಟಿಂಗ್ (64 ರನ್) ಮತ್ತು ಕಾರ್ತಿಕ್ ಅಜೇಯ 48 ರನ್ ಗಳ ನೆರವಿನಿಂದಾಗಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳನ್ನು ಕಲೆ ಹಾಕಿತು. ಸ್ಮಿತ್ ಶೂನ್ಯಕ್ಕೆ ಔಟಾಗುತ್ತಿದ್ದಂತೆಯೇ ಗುಜರಾತ್ ತಂಡದಲ್ಲಿ ದುಗುಡವೇರ್ಪಟ್ಟಿತಾದರೂ ಮತ್ತೊಂದು ತುದಿಯಲ್ಲಿದ್ದ ಮೆಕ್ಕಲಮ್ ಸಮಯೋಚಿತ ಆಟ ಪ್ರದರ್ಶಿಸಿದರು.
ಕೇವಲ 44 ಎಸೆತಗಳಲ್ಲಿ 65 ರನ್ ಸಿಡಿಸಿದ ಮೆಕ್ಕಲಮ್ ಗೆ ನಾಯಕ ಸುರೇಶ್ ರೈನಾ ಉತ್ತಮ ಸಾಥ್ ನೀಡಿದರಾದರೂ, ಭಜ್ಜಿ ಬೌಲಿಂಗ್ ನಲ್ಲಿ ಶರ್ಮಾಗೆ ಕ್ಯಾಚಿತ್ತು ಹೊರ ನಡೆದರು. ಬಳಿಕ ತಂಡದ ಮೊತ್ತ 99 ರನ್ ಗಳಾಗಿದ್ದಾಗ ಮೆಕ್ಕಲಮ್ ಕೂಡ ಮಲಿಂಗಾ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಬಳಿಕ ಕ್ರೀಸ್ ಗೆ ಬಂದ ಕಿಷನ್ (11) ಮತ್ತು ಕಾರ್ತಿಕ್ ಜೋಡಿ ಮುಂಬೈ ಇಂಡಿಯನ್ಸ್ ಬೌಲರ್ ಗಳಿಗೆ ಒಂದಷ್ಟು ಪ್ರತಿರೋಧ ಒಡ್ಡಿದರು. ಆದರೆ ಈ ನಡುವೆ 11 ರನ್ ಗಳಿಸಿದ್ದ ಕಿಷನ್ ಮೆಕ್ ಲೀನಿಘನ್ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಜೇಸನ್ ರಾಯ್ ಜೊತೆ ಗೂಡಿದ ಕಾರ್ತಿಕ್ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 23 ರನ್ ಗಳಿಸಿದರು. ಕಾರ್ತಿಕ್ ಅಜೇಯ 48 ರನ್ ಗಳಿಸಿದರೆ ರಾಯ್ 14 ರನ್ ಗಳಿಸಿ ಗುಜರಾತ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಅಂತಿಮವಾಗಿ ಗುಜರಾತ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ. ಮುಂಬೈ ಪರ ಮೆಕ್ ಲೀನಿಘನ್ 2 ವಿಕೆಟ್ ಪಡೆದರೆ, ಮಲಿಂಗಾ ಮತ್ತು ಹರ್ಭಜನ್ ಸಿಂಗ್ ತಲಾ 1 ವಿಕೆಟ್ ಪಡೆದರು. ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲು 177 ರನ್ ಗಳ ಗುರಿಯನ್ನು ಬೆನ್ನು ಹತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


