ಕ್ರಿಕೆಟ್

ಪಾಕ್ ಜೆರ್ಸಿ ತೊಟ್ಟಿದ್ದ ಕಾಶ್ಮೀರಿ ಕ್ರಿಕೆಟ್ ಕ್ಲಬ್ ಆಟಗಾರರು ಪೊಲೀಸರ ವಶಕ್ಕೆ

ಏಪ್ರಿಲ್ 2ರಂದು ಪಾಕಿಸ್ತಾನ ಜೆರ್ಸಿ ತೊಟ್ಟು ಪಾಕಿಸ್ತಾನ ರಾಷ್ಟ್ರಗೀತೆಯನ್ನು ಆಡಿದ್ದ ಕಾಶ್ಮೀರ ಕ್ರಿಕೆಟ್ ಕ್ಲಬ್ ತಂಡದ ಆಟಗಾರರನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಕ್ ಜೆರ್ಸಿ ತೊಟ್ಟಿದ್ದ ಕಾಶ್ಮೀರಿ ಕ್ರಿಕೆಟ್ ಕ್ಲಬ್ ಆಟಗಾರರು ಪೊಲೀಸರ ವಶಕ್ಕೆ
ಕಾಶ್ಮೀರಿ ಕ್ರಿಕೆಟ್ ತಂಡದ ಆಟಗಾರರು
Published On :
ಕಾಶ್ಮೀರ: ಏಪ್ರಿಲ್ 2ರಂದು ಪಾಕಿಸ್ತಾನ ಜೆರ್ಸಿ ತೊಟ್ಟು ಪಾಕಿಸ್ತಾನ ರಾಷ್ಟ್ರಗೀತೆಯನ್ನು ಆಡಿದ್ದ ಕಾಶ್ಮೀರ ಕ್ರಿಕೆಟ್ ಕ್ಲಬ್ ತಂಡದ ಆಟಗಾರರನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಬಾ ದರ್ಯಾ ಉದ್ದೀನ್ ಕ್ರಿಕೆಟ್ ತಂಡದ ಆಟಗಾರರು ಗಂದರ್ ಬಾಲ್ ನಲ್ಲಿನ ವಾಯೀ ಮೈದಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಪಾಕ್ ಜೆರ್ಸಿಯನ್ನು ತೊಟ್ಟು ಪಂದ್ಯಕ್ಕೂ ಮುನ್ನ ಗೌರವಾರ್ಥವಾಗಿ ಪಾಕಿಸ್ತಾನ ರಾಷ್ಟ್ರಗೀತೆಯನ್ನು ಹಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಕ್ರಮಕೈಗೊಂಡಿರುವ ಪೊಲೀಸರು ತಂಡದ ಆಟಗಾರರನ್ನು ವಶಕ್ಕೆ ಪಡೆದಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಕಾಶ್ಮೀರದ ಉಪ ಪೊಲೀಸ್ ಮಹಾನಿರೀಕ್ಷಕ ಗುಲಾಂ ಹಸನ್ ಭಟ್ ಹೇಳಿದ್ದಾರೆ. 
ಇನ್ನು 11 ಆಟಗಾರರನ್ನು ಬಂಧಿಸುತ್ತಿದ್ದಂತೆ ಆಟಗಾರರ ಕುಟುಂಬಸ್ಥರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆಟಗಾರರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಿದ್ದು ಕೆಲ ಸಮಯ ಪರಿಸ್ಥಿತಿ ಬಿಗಡಾಯಿಸಿತ್ತು ಎಂದು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 2ರಂದು ಚೆನಾನಿ-ನಶ್ರೀ ಸುರಂಗವನ್ನು ಉದ್ಘಾಟಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದರು. ಅಂದೇ ಈ ಘಟನೆ ನಡೆದಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.