ಕ್ರಿಕೆಟ್

ಪಾಕ್ ಜೆರ್ಸಿ ತೊಟ್ಟು ಪಾಕ್ ರಾಷ್ಟ್ರ ಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟ್ ತಂಡ, ವಿಡಿಯೋ ವೈರಲ್

ಕಾಶ್ಮೀರಿ ಕ್ರಿಕೆಟ್ ಕ್ಲಬ್ ತಂಡದ ಆಟಗಾರರು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟು ಪಂದ್ಯಕ್ಕೆ ಮೊದಲು ಪಾಕ್ ರಾಷ್ಟ್ರ ಗೀತೆ ಹಾಡಿರುವ ವಿಡಿಯೋ ಒಂದು ವೈರಲ್...

ಪಾಕ್ ಜೆರ್ಸಿ ತೊಟ್ಟು ಪಾಕ್ ರಾಷ್ಟ್ರ ಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟ್ ತಂಡ, ವಿಡಿಯೋ ವೈರಲ್
ಕಾಶ್ಮೀರಿ ಕ್ರಿಕೆಟ್ ತಂಡದ ಆಟಗಾರರು
Published On :
ನವದೆಹಲಿ: ಕಾಶ್ಮೀರಿ ಕ್ರಿಕೆಟ್ ಕ್ಲಬ್ ತಂಡದ ಆಟಗಾರರು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟು ಪಂದ್ಯಕ್ಕೆ ಮೊದಲು ಪಾಕ್ ರಾಷ್ಟ್ರ ಗೀತೆ ಹಾಡಿರುವ ವಿಡಿಯೋ ಒಂದು ವೈರಲ್ ಆಗಿದ್ದು ಭಾರೀ ವಿವಾದ ಸೃಷ್ಟಿಸಿದೆ. 
ಏಪ್ರಿಲ್ 2ರಂದು ಗಂದರ್ ಬಾಲ್ ನಲ್ಲಿನ ವಾಯೀ ಮೈದಾನದಲ್ಲಿ ನಡೆದಿದೆ. ಅದೇ ದಿನ ಚೆನಾನಿ-ನಶ್ರೀ ಸುರಂಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಬರುವವರಿದ್ದರು. 
ಪಾಕಿಸ್ತಾನ ಕ್ರಿಕೆಟ್ ತಂಡದ ಹಸಿರು ಸಮವಸ್ತ್ರ ಧರಿಸಿಕೊಂಡು ಪಾಕ್ ರಾಷ್ಟ್ರ ಗೀತೆ ಹಾಡಿದ ಈ ತಂಡಕ್ಕೆ ಬಾಬಾ ದರ್ಯಾ ಉದ್ದೀನ್ ಹೆಸರನ್ನು ಇರಿಸಲಾಗಿದೆ. 
ಗಂದರ್ ಬಾಲ್ ನ ವಾಯೀ ಮೈದಾನದಲ್ಲಿ ಪಂದ್ಯದ ಆರಂಭಕ್ಕೂ ಮುನ್ನ ವೀಕ್ಷಕ ವಿವರಣೆಗಾರನು ಮೈಕ್ ನಲ್ಲಿ ಈಗ ಗೌರವದ ಸಂಕೇತವಾಗಿ ಪಾಕಿಸ್ತಾನಿ ರಾಷ್ಟ್ರಗೀತೆಯನ್ನು ಹಾಡಲಾಗುವುದು ಎಂದು ಘೋಷಿಸಿದ್ದ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.