ವಿಶ್ವಕಪ್ ಗೆಲುವಿಗೆ 6 ವರ್ಷ; ಗೆಲುವಿನ ಕ್ಷಣಗಳ ಮೆಲುಕು ಹಾಕಿದ ಮಾಜಿ ಕ್ರಿಕೆಟಿಗರು!
ಭಾರತದ 28 ವರ್ಷಗಳ ಕನಸು ನನಸಾದ ಕ್ಷಣಕ್ಕೆ 6 ವರ್ಷ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಜಯಿಸಿದ ವಿಶ್ವಕಪ್ ಗೆಲುವಿಗೆ ಇಂದು 6 ವರ್ಷಗಳು ತುಂಬಿದ್ದು..

ನವದೆಹಲಿ: ಭಾರತದ 28 ವರ್ಷಗಳ ಕನಸು ನನಸಾದ ಕ್ಷಣಕ್ಕೆ 6 ವರ್ಷ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಜಯಿಸಿದ ವಿಶ್ವಕಪ್ ಗೆಲುವಿಗೆ ಇಂದು 6 ವರ್ಷಗಳು ತುಂಬಿದ್ದು, ಇದೇ ಖುಷಿಯಲ್ಲಿ ಮಾಜಿ ಕ್ರಿಕೆಟಿಗರು ಆ ಗೆಲುವಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಎಂಎಸ್ ಧೋನಿ ನೇತೃತ್ವದ ತಂಡ ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಘಟಾನುಘಟಿ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಏಪ್ರಿಲ್ 2 2011, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಎದುರಾಳಿಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಎಂಎಸ್ ಧೋನಿ ನೇತೃತ್ವದ ಭಾರತ ತಂಡ 48.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಐತಿಹಾಸಿಕ ಗೆಲುವು ಸಾಧಿಸಿತ್ತು. ಗೌತಮ್ ಗಂಭೀರ್ (97 ರನ್ ) ಮತ್ತು ಅಂತಿಮ ಹಂತದಲ್ಲಿ ಗೆಲುವಿನ ರನ್ ಭಾರಿಸಿದ ನಾಯಕ ಎಂಎಸ್ ಧೋನಿ (ಅಜೇಯ 91) ಹೋರಾಟದ ಫಲವಾಗಿ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಮುಡಿಗೇರಿತ್ತು.
ಈ ಅಭೂತಪೂರ್ವ ಕ್ಷಣಕ್ಕೆ ಇಂದು 6 ವರ್ಷ ತುಂಬಿದ್ದು, ಅಪೂರ್ವ ಕ್ಷಣಗಳನ್ನು ಮಾಜಿ ಕ್ರಿಕೆಟಿಗರು ಮೆಲುಕ ಹಾಕಿದ್ದು, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಪೀಳಿಗೆಯ ಅತ್ಯುತ್ತಮ ನೆನಪು ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಅಭೂತ ಪೂರ್ವ ಗೆಲುವು ಎಂದು ಮಹಮದ್ ಕೈಫ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


