ಕ್ರಿಕೆಟ್

ಬಿಸಿಸಿಐ ಒತ್ತಡಕ್ಕೆ ಮಣಿದು 2 ಹಂತದ ಟೆಸ್ಟ್ ಸರಣಿ ಪ್ರಸ್ತಾಪ ಕೈಬಿಟ್ಟ ಐಸಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ 2 ಹಂತದಲ್ಲಿ ಟೆಸ್ಟ್ ಸರಣಿ ನಡೆಸುವ ಪ್ರಸ್ತಾಪಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ...

ಬಿಸಿಸಿಐ ಒತ್ತಡಕ್ಕೆ ಮಣಿದು 2 ಹಂತದ ಟೆಸ್ಟ್ ಸರಣಿ ಪ್ರಸ್ತಾಪ ಕೈಬಿಟ್ಟ ಐಸಿಸಿ
ಐಸಿಸಿ
Published On :

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ 2 ಹಂತದಲ್ಲಿ ಟೆಸ್ಟ್ ಸರಣಿ ನಡೆಸುವ ಪ್ರಸ್ತಾಪಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಐಸಿಸಿ ತನ್ನ ಕಾರ್ಯಸೂಚಿಯಿಂದಲೇ ಈ ಪ್ರಸ್ತಾಪವನ್ನು ಕೈಬಿಟ್ಟಿದೆ.

ಈ ಮೂಲಕ ಐಸಿಸಿ ಮೇಲೆ ಬಿಸಿಸಿಐ ಮತ್ತೊಮ್ಮೆ ತನ್ನ ಪ್ರಭಾವವನ್ನು ತೋರಿಸಿಕೊಂಡಿದೆ. 2 ಹಂತದ ಟೆಸ್ಟ್ ಸರಣಿಯಿಂದ ದುರ್ಬಲ ರಾಷ್ಟ್ರಗಳಲ್ಲಿ ಕ್ರಿಕೆಟ್ ಅಭಿವೃದ್ಧಿಯಾಗುವುದಿಲ್ಲ ಎಂಬ ಭಾರತದ ನಿಲುವಿಗೆ ಶ್ರೀಲಂಕಾ, ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ ಬೆಂಬಲ ಸೂಚಿಸಿದ್ದವು. ಇನ್ನು ಇದೇ ವೇಳೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಪರ ಎನ್ನಲಾದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸಹ ಬಿಸಿಸಿಐಗೆ ತನ್ನ ಬೆಂಬಲ ಸೂಚಿಸಿದ್ದರಿಂದ ಐಸಿಸಿ ಬಹುಮತದ ಕೊರತೆಯಿಂದ ಈ ಪ್ರಸ್ತಾಪವನ್ನು ಕೈಬಿಟ್ಟಿದೆ.

ದುಬೈನಲ್ಲಿ ನಡೆದ ಐಸಿಸಿ ಅಂಗಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಲ 2 ದಿನದ ಸಭೆಯಲ್ಲಿ ತನ್ನ ನೂತನ ಯೋಜನೆ 2 ಹಂತದ ಟೆಸ್ಟ ಸರಣಿಗೆ ಐಸಿಸಿ ಒಪ್ಪಿಗೆ ಪಡೆಯಬೇಕಿತ್ತು. ಆದರೆ ಈ ಪ್ರಸ್ತಾವನ್ನು ಐಸಿಸಿ ತನ್ನ ಕಾರ್ಯಸೂಚಿಯಿಂದಲೇ ಕೈಬಿಟ್ಟಿದೆ. ಈ ಪ್ರಸ್ತಾವಕ್ಕೆ 3ನೇ 2ರಷ್ಟು ಬಹುಮತ ಬೇಕಿತ್ತು ಆದರೆ ಭಾರತ ಸೇರಿದಂತೆ 4 ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.