ಕ್ರಿಕೆಟ್

4ನೇ ಏಕದಿನ ಪಂದ್ಯ: ಟೀಂ ಇಂಡಿಯಾಗೆ 261ರನ್ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್

ರಾಂಚಿಯಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತ ಗೆಲ್ಲಲು...

4ನೇ ಏಕದಿನ ಪಂದ್ಯ: ಟೀಂ ಇಂಡಿಯಾಗೆ 261ರನ್ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್
ಸಾಂದರ್ಭಿಕ ಚಿತ್ರ
Published On :
ರಾಂಚಿ: ರಾಂಚಿಯಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತ ಗೆಲ್ಲಲು 261ರನ್ ಗಳ ಟಾರ್ಗೆಟ್ ನೀಡಿದೆ. 
ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರು ಜಿಲ್ಲೆ ರಾಂಚಿಯ ಜೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಪ್ರಾರಂಭಿಕ ಪರಾಕ್ರಮ ಮೆರೆದ ಕಿವೀಸ್ ಆಟಗಾರರು ಇನಿಂಗ್ಸ್ ಅಂತ್ಯದಲ್ಲಿ ರನ್​ಗಳಿಸಲು ಪರದಾಡಿದರು. ಪರಿಣಾಮ ಆರಂಭಿಕ್ ಬ್ಯಾಟ್ಸ್ ಮನ್ ಮಾರ್ಟಿನ್ ಗುಪ್ಟಿಲ್ (72) ಅವರ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ನ್ಯೂಜಿಲೆಂಡ್ ನಿಗದಿತ 50 ಓವರ್​ಗೆ 7ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತು.
3ನೇ ಪಂದ್ಯದ ಸೋಲಿನ ಒತ್ತಡದಲ್ಲಿರುವ ವಿಲಿಯಮ್ಸನ್ ಪಡೆಗೆ ಸರಣಿ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ಭಾರತ ತಂಡ  ಈಗಾಗಲೇ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದರೆ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ.
ಕಳೆದ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಅಜೇಯ 154 ರನ್ ಸಿಡಿಸಿದ ಕೊಹ್ಲಿ ಮತ್ತು 80 ರನ್ ಸಿಡಿಸಿದ್ದ ಧೋನಿ ಕಿವೀಸ್ ಪಡೆಗೆ ಮಾರಕವಾಗುವ ಸಾಧ್ಯತೆ ಇದೆ.
ಧೋನಿಗೆ ರಾಂಚಿ ತವರು ಜಿಲ್ಲೆಯಾದ್ದರಿಂದ ತವರು ಅಭಿಮಾನಿಗಳ ಬೆಂಬಲವಿದೆ. ಹಾಗೆಯೇ ಕೊಹ್ಲಿ ರಾಂಚಿ ಪಿಚ್ ಅದೃಷ್ಟದ ಪಿಚ್ ಆಗಿದ್ದು, ಈ ಹಿಂದೆ ಇದೇ ಪಿಚ್ ನಲ್ಲಿ ಕೊಹ್ಲಿ ಅದ್ಬುತ  ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಅಜೇಯ 77 ರನ್ ಭಾರಿಸಿದ್ದ ಕೊಹ್ಲಿ, ಶ್ರೀಲಂಕಾ ವಿರುದ್ಧ ಚೇಸಿಂಗ್ 139 ರನ್ ಗಳಿಸಿ ಭಾರತದ ಗೆಲುವಿನಲ್ಲಿ  ಮಹತ್ವದ ಪಾತ್ರ ನಿರ್ವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.