3 ನೇ ಏಕದಿನ ಪಂದ್ಯ: ಭಾರತಕ್ಕೆ 286 ರನ್ ಗಳ ಗುರಿ ನೀಡಿದ ಕಿವೀಸ್ ಪಡೆ
ನ್ಯೂಜಿಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತಕ್ಕೆ 286 ರನ್ ಗಳ ಗುರಿ ನೀಡಿದೆ.

ಮೊಹಾಲಿ: ನ್ಯೂಜಿಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತಕ್ಕೆ 286 ರನ್ ಗಳ ಗುರಿ ನೀಡಿದೆ.
49.4 ಓವರ್ ಗಳಿಗೆ ಸರ್ವಪತನ ಕಂಡ ನ್ಯೂಜಿಲ್ಯಾಂಡ್ ತಂಡದ ಪರ ಟಾಮ್ ಲಾಥಮ್ (61) ಜೇಮ್ಸ್ ನೀಶಾಮ್ (57) ರನ್ ಗಳ ನೆರವಿನಿಂದ 85 ರನ್ ಗಳನ್ನು ಗಳಿಸಿತು. ಪ್ರಾರಂಭಿಕ ಆಟಗಾರ ಟಾಮ್ ಲಾಥಾಮ್ ಉತ್ತಮ ಪ್ರದರ್ಶನ ನೀಡಿದರಾದರೂ ಮಾಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಭಾರತದ ಸ್ಪಿನ್ನರ್ ಗಳಾದ ಅಮಿತ್ ಮಿಶ್ರಾ ಹಾಗೂ ಕೇದಾರ್ ಜಾಧವ್ ಅವರ ಸ್ಪಿನ್ನರ್ ದಾಳಿಗೆ ತತ್ತರಿಸಿದರು.
ನಂತರ ಟಾಮ್ ಲಾಥಾಮ್ ಗೆ ಜೊತೆಯಾದ ನೀಶಾಮ್ಸ್ ಅರ್ಧಶತಕ ನ್ಯೂಜಿಲ್ಯಾಂಡ್ ತಂಡ ಭಾರತಕ್ಕೆ 286 ರನ್ ಗಳ ಗುರಿ ನೀಡಲು ನೆರವಾಯಿತು. ಪಂದ್ಯದ ಕೊನೆಯ ಭಾಗದಲ್ಲಿ ನಿಶಾಮ್ಸ್ ಹಾಗೂ ಮ್ಯಾಟ್ ಹೆನ್ರಿ 84 ರನ್ ಗಳನ್ನು ಕಲೆಹಾಕಿದರು. ಭಾರತದ ಪರ ಅಮಿತ್ ಮಿಶ್ರ 46 ರನ್ ಗಳನ್ನು ನೀಡಿ 2 ವಿಕೆಟ್ ಪಡೆದರೆ ಕೇದಾರ್ ಜಾದವ್ 29 ರನ್ ಗಳನ್ನು ನೀಡಿ 3 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


