594ರನ್ ಗಳ ಜೊತೆಯಾಟ, ರಣಜಿಯಲ್ಲಿ ಮಹಾ ದಾಖಲೆ ಬರೆದ ಮಹಾರಾಷ್ಟ್ರ ಕ್ರಿಕೆಟಿಗರು
ಮಹಾರಾಷ್ಟ್ರದ ಸ್ವಪ್ನಿಲ್ ಗುಗಲೆ ಹಾಗೂ ಅಂಕಿತ್ ಬಾವ್ನೆ ಅವರು ಶುಕ್ರವಾರ 594ರನ್ ಗಳ ಜೊತೆಯಾಟವಾಡುವ ಮೂಲಕ ರಣಜಿಯಲ್ಲಿ...

Published On :
ಮುಂಬೈ: ಮಹಾರಾಷ್ಟ್ರದ ಸ್ವಪ್ನಿಲ್ ಗುಗಲೆ ಹಾಗೂ ಅಂಕಿತ್ ಬಾವ್ನೆ ಅವರು ಶುಕ್ರವಾರ 594ರನ್ ಗಳ ಜೊತೆಯಾಟವಾಡುವ ಮೂಲಕ ರಣಜಿಯಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ.
ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ಮಹಾರಾಷ್ಟ್ರದ ಈ ಯುವ ಆಟಗಾರರು ದೆಹಲಿ ವಿರುದ್ಧ 3ನೇ ವಿಕೆಟ್ ಗೆ 594ರನ್ ಜೊತೆಯಾಟ ಸಾಧಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಭಾರತೀಯ ಆಟಗಾರರು ಸಾಧಿಸಿದ ಅತಿ ದೊಡ್ಡ ಜೊತೆಯಾಟವಾಗಿದೆ.
ನಾಯಕ ಹಾಗೂ ಆರಂಭಿಕ ಆಟಗಾರ 25 ವರ್ಷ ವಯಸ್ಸಿನ ಗುಗಲೆ ಅವರು ಅಜೇಯ 351ರನ್ (521 ಎಸೆತಗಲು, 37 ಬೌಂಡರಿ, 5 ಸಿಕ್ಸ್) ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ 23 ವರ್ಷದ ಬಾವ್ನೆ 258 ರನ್ (500 ಎಸೆತಗಳು, 18 ಬೌಂಡರಿ, ಎರಡು ಸಿಕ್ಸ್) ಗಳಿಸಿದರು.
ಈ ಹಿಂದೆ 2006ರಲ್ಲಿ ಶ್ರೀಲಂಕಾದ ಮಹೇಲ ಜಯವರ್ದನೆ ಹಾಗೂ ಕುಮಾರ್ ಸಂಗಕ್ಕಾರ ಅವರು ಕೊಲೊಂಬೊದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 624ರನ್ ಗಳ ಜೊತೆಯಾಟ ಸಾಧಿಸಿ ವಿಶ್ವ ದಾಖಲೆ ಬರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


