ಬ್ಯಾಟಿಂಗ್ ಮಾಡುವುದನ್ನು ತುಂಬಾ ಇಷ್ಟಪಡುವ ಸಚಿನ್ ಫೀಲ್ಡಿಂಗ್ ಬಗ್ಗೆ ಹೇಳಿದ್ದೇನು?
ತಮ್ಮ 22 ವರ್ಷಗಳಲ್ಲಿ ಸುದೀರ್ಘ ಕಾಲದ ಕ್ರಿಕೆಟ್ ಜೀವನದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಗೆ ಬ್ಯಾಟಿಂಗ್ ಬಗ್ಗೆ ಅಪಾರ ...

ನವದೆಹಲಿ: ತಮ್ಮ 22 ವರ್ಷಗಳಲ್ಲಿ ಸುದೀರ್ಘ ಕಾಲದ ಕ್ರಿಕೆಟ್ ಜೀವನದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಗೆ ಬ್ಯಾಟಿಂಗ್ ಬಗ್ಗೆ ಅಪಾರ ಪ್ರೀತಿ. ಆದರೆ ಫೀಲ್ಡಿಂಗ್ ಮಾತ್ರ ಅವರ ಪಾಲಿಗೆ ಕಿರುಕುಳವಂತೆ.
ದೆಹಲಿಯಲ್ಲಿ ಆಯೋಜಿಸಿದ್ದ ಮ್ಯಾರಥಾನ್ ನಲ್ಲಿ ಖಾಸಗಿ ಪತ್ರಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಸ್ಟರ್ ಬ್ಲಾಸ್ಟರ್ ಫೀಲ್ಡಿಂಗ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೈಹಿಕವಾಗಿ ನಾನು ಫಿಟ್ ಆಗಿದ್ದೆ. ಆದರೂ ನನಗೆ ಫೀಲ್ಡಿಂಗ್ ಮಾಡುವುದು ದೊಡ್ಡ ಟಾರ್ಚರ್ ಆಗಿತ್ತು. ಎಂದು ಹೇಳಿದ್ದಾರೆ.
ಏಕದಿನ ಸರಣಿಗಳಲ್ಲಿ ಭಾರತದ ಎರಡನೇ ಯಶಸ್ವಿ ಫೀಲ್ಡರ್ ಆಗಿದ್ದ ಸಚಿನ್ ಸುಮಾರು 115 ಕ್ಯಾಚ್ ಹಿಡಿದಿದ್ದಾರೆ. ತಾವು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿರುವುದುರಿಂದ ವಿಕೆಟ್ ಗಳ ನಡುವೆ ಓಡಿ ಹೆಚ್ಚು ರನ್ ಗಳಿಸುವುದು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.
ಕ್ರಿಕೆಟ್ ನಂತ ತಂಡದ ಆಟಕ್ಕೆ ವಯಕ್ತಿಕ ತರಬೇತಿ ಅತ್ಯಗತ್ಯ ಎಂದು ಹೇಳಿದ್ದಾರೆ. ಇಡೀ ವಿಶ್ವದಲ್ಲೇ ಭಾರತ ತಂಡಅತಿ ಉತ್ತಮ ಎಂದು ಸಚಿನ್ ಅಭಿಪ್ರಾಯ ಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


