ಕೋಣೆಯಲ್ಲಿ ಹುಡುಗಿಯರನ್ನು ಉಳಿಸಿಕೊಂಡಿದ್ದಕ್ಕೆ ಬಾಂಗ್ಲಾ ಆಟಗಾರರಿಗೆ ಭಾರೀ ದಂಡ
ಬಾಂಗ್ಲಾ ಪ್ರಿಮಿಯರ್ ಲೀಗ್ ವೇಳೆ ಬಾಂಗ್ಲಾದೇಶದ ಕ್ರಿಕೆಟಿಗರಾದ ಅಮೀನ್ ಹುಸೇನ್ ಮತ್ತು ಶಬ್ಬೀರ್ ರೆಹ್ಮಾನ್ ತಮ್ಮ ಹೊಟೇಲ್ ಕೋಣೆಯಲ್ಲಿ ಹುಡುಗಿಯನ್ನು ಉಳಿಸಿಕೊಂಡಿದ್ದಕ್ಕೆ...

Published On :
ಢಾಕಾ: ಬಾಂಗ್ಲಾ ಪ್ರಿಮಿಯರ್ ಲೀಗ್ ವೇಳೆ ಬಾಂಗ್ಲಾದೇಶದ ಕ್ರಿಕೆಟಿಗರಾದ ಅಮೀನ್ ಹುಸೇನ್ ಮತ್ತು ಶಬ್ಬೀರ್ ರೆಹ್ಮಾನ್ ತಮ್ಮ ಹೊಟೇಲ್ ಕೋಣೆಯಲ್ಲಿ ಹುಡುಗಿಯನ್ನು ಉಳಿಸಿಕೊಂಡಿದ್ದಕ್ಕೆ ಬಾಂಗ್ಲಾ ಕ್ರಿಕೆಟ್ ಮಂಡಳಿ 10 ಲಕ್ಷ ರುಪಾಯಿ ದಂಡ ವಿಧಿಸಿದೆ.
ಬಾಂಗ್ಲಾ ಕ್ರಿಕೆಟ್ ಇತಿಹಾಸದಲ್ಲಿ ಇದು ಭಾರೀ ದಂಡದ ಮೊತ್ತವಾಗಿದೆ. ಇನ್ನು ಬಾಂಗ್ಲಾ ಪ್ರಿಮಿಯರ್ ಲೀನ್ ನಲ್ಲಿ ಹಗರಣಗಳು ಹೊಸತಲ್ಲ. ಮ್ಯಾಚ್ ಫಿಕ್ಸಿಂಗ್, ಭ್ರಷ್ಟಾಚಾರದಿಂದಾಗಿ 2 ವರ್ಷ ಟೂರ್ನಿಯನ್ನೇ ಬ್ಯಾನ್ ಮಾಡಲಾಗಿತ್ತು.
ಇದೀಗ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಇಬ್ಬರು ಆಟಗಾರರು ಇಂತಹ ಅಶಿಸ್ತಿನಲ್ಲಿ ತೊಡಗಿರುವುದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ಆಘಾತಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
fineದಂಡPlayerಆಟಗಾರರುಯುವತಿಯರುBangladesh Cricket Boardfemale guesthotel roomಬಾಂಗ್ಲಾದೇಶ ಕ್ರಿಕೆಟ್ ಮಂಡಳಿಹೊಟೇಲ್ ರೂಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


