3ನೇ ಟೆಸ್ಟ್: 236ಕ್ಕೆ ಇಂಗ್ಲೆಂಡ್ ಆಲ್ ಔಟ್, ಭಾರತಕ್ಕೆ ಗೆಲ್ಲಲು 103 ರನ್ ಗಳ ಗುರಿ
ಭಾರತದ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 236ರನ್ ಗಳಿಗೆ ಆಲ್ ಔಟ್ ಆಗಿದ್ದು, ಕೊಹ್ಲಿ ಪಡೆಗೆ ಗೆಲ್ಲಲು 103 ರನ್ ಗಳ ಸಾಧಾರಣ ಗುರಿ ನೀಡಿದೆ.

ಮೊಹಾಲಿ: ಭಾರತದ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 236ರನ್ ಗಳಿಗೆ ಆಲ್ ಔಟ್ ಆಗಿದ್ದು, ಕೊಹ್ಲಿ ಪಡೆಗೆ ಗೆಲ್ಲಲು 103 ರನ್ ಗಳ ಸಾಧಾರಣ ಗುರಿ ನೀಡಿದೆ.
ನಿನ್ನೆ 4 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿದ್ದ ಇಂಗ್ಲೆಂಡ್ ತಂಡ ಇಂದು ಕೇವಲ 158 ರನ್ ಗಳನ್ನು ಪೇರಿಸುವಷ್ಟರಲ್ಲಿ ತನ್ನ ಆರು ವಿಕೆಟ್ ಕಳೆದುಕೊಂಡಿತು. ಭಾರತದ ಮಾರಕ ಬೌಲಿಂಗ್ ಗೆ ಕಂಗಾಲಾದ ಇಂಗ್ಲೆಂಡ್ ಬ್ಯಾಟ್ಸಮನ್ ಪೆವಿಲಿಯನ್ ಪರೇಡ್ ನಡೆಸುವುದರೊಂದಿಗೆ ಕೇವಲ 236 ರನ್ ಗಳಿಗೆ ಆಲ್ ಔಟ್ ಆಗಿದ್ದಾರೆ. ಆ ಮೂಲಕ ಭಾರತಕ್ಕೆ ಗೆಲ್ಲಲು 103 ರನ್ ಗಳ ಗುರಿ ನೀಡಿದ್ದಾರೆ. ಇನ್ನೂ ಒಂದೂವರೆ ದಿನದ ಆಟ ಬಾಕಿ ಇದ್ದು, ಇಂಗ್ಲೆಂಡ್ ನೀಡಿರುವ 103 ರನ್ ಗಳ ಸಾಧಾರಣ ಗುರಿಯನ್ನು ಭಾರತ ಇಂದೇ ಯಶಸ್ವಿಯಾಗಿ ಬೆನ್ನತ್ತುವ ಸಾಧ್ಯತೆ ಇದೆ.
ಇನ್ನು ಬೌಲಿಂಗ್ ನಲ್ಲಿ ಭಾರತ ತಂಡದ ಪರ ಆರ್ ಅಶ್ವಿನ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಮಹಮದ್ ಶಮಿ, ಜಡೇಜಾ ಮತ್ತು ಯಾದವ್ ತಲಾ 2 ವಿಕೆಟ್ ಗಳಿಸಿದರು. ಇಂಗ್ಲೆಂಡ್ ಪರ ಜೋ ರೂಟ್ 78 ರನ್ ಹಾಗೂ ಹಮೀದ್ ಅಜೇಯ 59 ರನ್ ಗಳಿಸಿದರು. ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ 7 ರನ್ ಗಳಿಸಿದೆ. ಮುರಳಿ ವಿಜಯ್ ಹಾಗೂ ಪಾರ್ಥೀವ್ ಪಟೇಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


