ಕ್ರಿಕೆಟ್

ಎಂಎಸ್ ಧೋನಿ 2019ರ ವಿಶ್ವಕಪ್ವರೆಗೂ ಆಡುವುದಕ್ಕೆ ಆಯ್ಕೆಗಾರರ ಬೆಂಬಲ

ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 2019ರ ವಿಶ್ವಕಪ್ವರೆಗೂ ಆಡುವುದಕ್ಕೆ ರಾಷ್ಟ್ರೀಯ ಆಯ್ಕೆಗಾರರ ಬೆಂಬಲ...

ಎಂಎಸ್ ಧೋನಿ 2019ರ ವಿಶ್ವಕಪ್ವರೆಗೂ ಆಡುವುದಕ್ಕೆ ಆಯ್ಕೆಗಾರರ ಬೆಂಬಲ
ಎಂಎಸ್ ಧೋನಿ
Published On :
ನವದೆಹಲಿ: ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 2019ರ ವಿಶ್ವಕಪ್ವರೆಗೂ ಆಡುವುದಕ್ಕೆ ರಾಷ್ಟ್ರೀಯ ಆಯ್ಕೆಗಾರರ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಸದ್ಯ ಏಕದಿನ ತಂಡದ ಹೊಂದಾಣಿಕೆಯನ್ನು ಬದಲಾಯಿಸುವ ಯಾವುದೇ ಯೋಜನೆಯನ್ನು ಆಯ್ಕೆ ಸಮಿತಿ ಹೊಂದಿಲ್ಲ. ಇಂಗ್ಲೆಂಡ್ ನಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್ ನಲ್ಲೂ ಆಡಬೇಕು ಎಂದು ಬಯಸಿದ್ದೇವೆ ಎಂದು ಆಯ್ಕೆ ಸಮಿತಿ ಹೇಳಿದೆ. 
ಎಂಎಸ್ ಧೋನಿ ಸದ್ಯದ ಫಾರ್ಮ್ ಮುಂದುವರೆಸಿದಲ್ಲಿ ಮುಂದಿನ ವಿಶ್ವಕಪ್ ವೇಳೆ ನಮ್ಮ ಕೆಲಸ ಇನ್ನಷ್ಟು ಸುಲಭವಾಗಲಿದೆ. ತಂಡದಲ್ಲಿರುವ ಹೊಸ ಆಟಗಾರನಲ್ಲಿರುವಷ್ಟು ಮಟ್ಟದ ಫಿಟ್ ನೆಸ್ ಅನ್ನು ಧೋನಿ ಹೊಂದಿದ್ದಾರೆ ಎಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ. 
ಟೀಂ ಇಂಡಿಯಾ ತಂಡದಲ್ಲಿ ಧೋನಿ ಸ್ಥಾನಕ್ಕೆ ಬರಬಲ್ಲ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಸದ್ಯಕ್ಕೆ ಯಾರೂ ಇಲ್ಲ ಎಂದು ಆಯ್ಕೆ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.