ಹಸ್ತದಲ್ಲಿನ ಗಾಯಕ್ಕೆ 8 ಹೊಲಿಗೆ ಹಾಕಿದ್ದರೂ ನೋವ ಲೆಕ್ಕಿಸದೆ ಕೊಹ್ಲಿ ಸಿಡಿಸಿದ್ದು 8 ಸಿಕ್ಸರ್!
ಆ ಭರ್ಜರಿ ಬ್ಯಾಟಿಂಗ್ ಮಾಡುವ ಹೊತ್ತಿಗೆ ಕೊಹ್ಲಿ ಹಸ್ತಕ್ಕೆ ಗಾಯವಾಗಿ 8 ಹೊಲಿಗೆ ಹಾಕಲಾಗಿತ್ತು. ಅಷ್ಟೊಂದು ಹೊಲಿಗೆ ಹಾಕಿದ್ದ ನೋವನ್ನು ಲೆಕ್ಕಿಸದೆ...

Published On :
ಬೆಂಗಳೂರು: ಮೇ 18ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೆಲ್ಲಿಸಿದ್ದು ನೋಡಿದ್ದೇವೆ.
ಪ್ರಸ್ತುತ ಪಂದ್ಯದಲ್ಲಿ ಕೊಹ್ಲಿ 50 ಬಾಲ್‌ಗಳಲ್ಲಿ 113 ರನ್ ಗಳಿಸಿ ದಾಖಲೆ ಸೃಷ್ಟಿಸಿದ್ದರು. ಐಪಿಎಲ್ ಪಂದ್ಯದಲ್ಲಿ ಕೊಹ್ಲಿಯ ನಾಲ್ಕನೇ ಶತಕವಾಗಿತ್ತು ಇದು.
ಆದರೆ ಆ ಭರ್ಜರಿ ಬ್ಯಾಟಿಂಗ್ ಮಾಡುವ ಹೊತ್ತಿಗೆ ಕೊಹ್ಲಿಯ ಎಡ ಹಸ್ತಕ್ಕೆ ಗಾಯವಾಗಿ 8 ಹೊಲಿಗೆ ಹಾಕಲಾಗಿತ್ತು. ಅಷ್ಟೊಂದು ಹೊಲಿಗೆ ಹಾಕಿದ್ದ ನೋವನ್ನು ಲೆಕ್ಕಿಸದೆ ಕೊಹ್ಲಿ ಬ್ಯಾಟಿಂಗ್ ಮಾಡಿದ್ದರು. ಪಂದ್ಯ ಮುಗಿದ ನಂತರ ಮಾತನಾಡಿದ ಕೊಹ್ಲಿ, ಪಂದ್ಯವನ್ನು ಗೆಲ್ಲಿಸುವ ಹೋರಾಟದಲ್ಲಿ ಈ ನೋವು ಯಾವುದೂ ಲೆಕ್ಕಕಿಲ್ಲ, ಕೈಯಲ್ಲಿ 10 ಹೊಲಿಗೆ ಹಾಕಿದ್ದರೂ ನಾನು ಅದನ್ನು ಕ್ಯಾರೇ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು.
50 ಬಾಲ್‌ಗಳಲ್ಲಿ 12 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿ ಕೊಹ್ಲಿ 113 ರನ್ ದಾಖಲಿಸಿದ್ದರು. ಪಂದ್ಯದುದ್ದಕ್ಕೂ ರನ್ ಮೆಶೀನ್‌ನಂತೆ ಆಟವಾಡಿದ ಕೊಹ್ಲಿಯ ಅಭೂತಪೂರ್ವ ಪ್ರದರ್ಶನಕ್ಕೆ ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯಾಗಿದೆ.
ಕೈಯಲ್ಲಿ 8 ಹೊಲಿಗೆ ಇದ್ದರೂ ಎಂಟು ಸಿಕ್ಸರ್ ಬಾರಿಸಿದ್ದಾರೆ ಕೊಹ್ಲಿ ಎಂಬ ಟ್ವೀಟ್ ನಿಂದ ಹಿಡಿದು, ಕೊಹ್ಲಿ ಅನ್ಯ ಗ್ರಹದಿಂದ ಬಂದವರು ಎನ್ನುವ ತರಹೇವಾರಿ ಟ್ವೀಟ್‌ಗಳಿಂದ ನೆಟಿಜನ್‌ಗಳು ಸೋಷ್ಯಲ್ ಮೀಡಿಯಾದಲ್ಲಿ ಕೊಹ್ಲಿಗೆ ಜೈಕಾರ ಕೂಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virat Kohliವಿರಾಟ್ ಕೊಹ್ಲಿIPLಐಪಿಎಲ್RCBಕಿಂಗ್ಸ್ ಇಲೆವನ್ ಪಂಜಾಬ್kings X1 punjabCricket Offbeatಕ್ರಿಕೆಟ್ ಸುದ್ದಿ ಸ್ವಾರಸ್ಯಆರ್ ಸಿ ಬಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


