ಪುಣೆ ವಿರುದ್ಧ ಸೋಲು: ಡೆಲ್ಲಿಗೆ ಪ್ಲೇ ಆಫ್ ಹಾದಿ ದುರ್ಗಮ
ಐಪಿಎಲ್ 9ನೇ ಆವೃತ್ತಿಯ ಪ್ಲೇ ಆಫ್ ರೇಸ್ ನಲ್ಲಿ ನಿಧಾನವಾಗಿ ಹಿಂದೆ ಬೀಳುತ್ತಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ...

ವಿಶಾಖಪಟ್ಟಣ: ಐಪಿಎಲ್ 9ನೇ ಆವೃತ್ತಿಯ ಪ್ಲೇ ಆಫ್ ರೇಸ್ ನಲ್ಲಿ ನಿಧಾನವಾಗಿ ಹಿಂದೆ ಬೀಳುತ್ತಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಸೋಲು ಅನುಭವಿಸಿದ್ದು, ಡೆಲ್ಲಿ ಪ್ಲೇ ಆಪ್ ಕನಸು ದುರ್ಗಮಗೊಂಡಿದೆ.
ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಪುಣೆ ತಂಡ 8.2 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದಾಗ ಮಳೆಯಿಂದಾಗಿ ಪಂದ್ಯ ಒಂದು ಗಂಟೆ ಸ್ಧಗಿತಗೊಂಡಿತು.
ಮತ್ತೆ ಆಟ ಆರಂಭವಾಗಿ 11 ಓವರ್ ಗೆ 1 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ್ದಾಗ ಮತ್ತೆ ಮಳೆ ಬಂದಿದ್ದರಿಂದ ಡಕ್ ವರ್ಥ್ ಲೂಯಿಸ್ ನಿಯಮದಡಿ ಪುಣೆ ತಂಡ 19 ರನ್ ಗಳಿಂದ ಪಂದ್ಯ ಜಯ ಗಳಿಸಿದೆ ಎಂದು ಘೋಷಿಸಲಾಯಿತು.
ಪುಣೆ ಪರ ಅಂಜಿಕ್ಯ ರಹಾನೆ ಅಜೇಯ 42, ಖವಾಜ 19, ಜಾರ್ಜ್ ಬೆಲ್ಲಿ ಅಜೇಯ 8 ರನ್ ಗಳಿಸಿದ್ದಾರೆ.
ಡೆಲ್ಲಿ ಪರ ಡಿಕಾಕ್ 2, ಶ್ರೇಯಸ್ ಅಯ್ಯರ್ 8, ಕರುಣ್ ನಾಯರ್ 41, ಸ್ಯಾಮ್ಸನ್ 10, ರಿಷಭ್ ಪಂತ್ 4, ಜೆಪಿ ಡುಮಿನಿ 14, ಕ್ರಿಸ್ ಮೋರಿಸ್ ಅಜೇಯ 38 ರನ್ ಗಳಿಸಿದ್ದಾರೆ.
ಪುಣೆ ಪರ ಅಶೋಕ್ ದಿಂಡಾ ಹಾಗೂ ಆಡಂ ಝಂಪಾ ತಲಾ 3 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


