ಹೆಣ್ಣು ಮಗುವಿನ ಅಪ್ಪನಾದ ಸುರೇಶ್ ರೈನಾ
ಕ್ರಿಕೆಟಿಗ ಸುರೇಶ್ ರೈನಾ -ಪ್ರಿಯಾಂಕಾ ದಂಪತಿಗಳಿಗೆ ಶನಿವಾರ ಹೆಣ್ಣು ಮಗು ಜನಿಸಿದೆ. ಐಪಿಎಲ್ ಪಂದ್ಯಗಳಲ್ಲಿ ಗುಜರಾತ್ ...

Published On :
ನೆದರ್‌ಲ್ಯಾಂಡ್ಸ್ : ಕ್ರಿಕೆಟಿಗ ಸುರೇಶ್ ರೈನಾ -ಪ್ರಿಯಾಂಕಾ ದಂಪತಿಗಳಿಗೆ ಶನಿವಾರ ಹೆಣ್ಣು ಮಗು ಜನಿಸಿದೆ. ಐಪಿಎಲ್ ಪಂದ್ಯಗಳಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕನಾಗಿರುವ ರೈನಾ ಇದೀಗ ತನ್ನ ಕುಟುಂಬದವರೊಂದಿಗೆ ನೆದರ್‌ಲ್ಯಾಂಡ್ಸ್‌ನಲ್ಲಿದ್ದಾರೆ.
ಸೋಷ್ಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರೈನಾ, ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದೇನೆ ಎಂದು ಪತ್ನಿಯೊಂದಿಗಿನ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.
ಕೆಲವೊಂದು ಮೂಲಗಳ ಪ್ರಕಾರ ರೈನಾ ತಮ್ಮ ಮೊದಲ ಮಗುವಿಗೆ ಶ್ರೇಯಾಂಶಿ ರೈನಾ ಎಂದು ಹೆಸರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ರೈನಾ ಪ್ರಿಯಾಂಕಾ ಚೌಧರಿಯನ್ನು ಮದುವೆಯಾಗಿದ್ದರು.
ಪತ್ನಿಯ ಹೆರಿಗೆ ನಿಮಿತ್ತ ಐಪಿಎಲ್ ಪಂದ್ಯದಿಂದ ಹೊರಗುಳಿದಿರುವ ರೈನಾ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಗುಜರಾತ್ ಲಯನ್ಸ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ. ಅದೇ ವೇಳೆ ಗುರುವಾರ ಕಾನ್ಪುರದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಇವರು ಅಲಭ್ಯವಾಗಲಿದ್ದಾರೆ.
Waiting and waiting ❤️❤️
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


