ರಾಯಲ್ಸ್ 'ಚಾಲೆಂಜ್'ಗೆ ಮಣಿದ ಲಯನ್ಸ್; ಆರ್‌ಸಿಬಿಗೆ 144 ರನ್ ಭರ್ಜರಿ ಜಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ 249 ರನ್‌ಗಳ ಗುರಿಯನ್ನು ಬೆನ್ನಟ್ಟಿ ಹೊರಟ ಲಯನ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಅನುಭವಿಸಬೇಕಾಗಿ ಬಂತು...

Published On :
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಲಯನ್ಸ್ ತಂಡದ ನಡುವಿನ ಐಪಿಎಲ್ ಪಂದ್ಯದಲ್ಲಿ ಆರ್‌ಸಿ ಬಿ 144 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ 249 ರನ್‌ಗಳ ಗುರಿಯನ್ನು ಬೆನ್ನಟ್ಟಿ ಹೊರಟ ಲಯನ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಅನುಭವಿಸಬೇಕಾಗಿ ಬಂತು.
ಆರಂಭಿಕ ದಾಂಡಿಗನಾಗಿ ಕ್ರೀಸ್ ಗಿಳಿದ ಸ್ಮಿತ್ ಎರಡನೇ ಓವರ್‌ನಲ್ಲಿ ಅರವಿಂದ್ ಬೌಲಿಂಗ್ ದಾಳಿಗೆ ವಿಕೆಟ್ ಕಳೆದುಕೊಂಡರು. 6 ಬಾಲ್ ಗಳನ್ನೆದುರಿಸಿದ ಸ್ಮಿತ್ 1 ಬೌಂಡರಿ ಬಾರಿಸಿ 7 ರನ್‌ಗಳನ್ನು ಗಳಿಸಿದ್ದಾರೆ. ಅನಂತರ ಬಂದ ಗುಜರಾತ್ ಲಯನ್ಸ್‌ನ ತಂಡದ ನಾಯಕ ಬಿಬಿ ಮೆಕಲಮ್ 13 ಬಾಲ್‌ಗಳಲ್ಲಿ 11 ರನ್ ಬಾರಿಸಿ ಚಹಾಲ್ ಬಾಲ್‌ಗೆ ಡಿವಿಲಿಯರ್ಸ್ ಗೆ ಕ್ಯಾಚಿತ್ತು ಔಟಾದರು. ಇದಾದನಂತರ ಆರ್ ಜಡೇಜಾ ಕೆಲಹೊತ್ತು ಕ್ರೀಸ್ ನಲ್ಲಿದ್ದರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. 19 ಬಾಲ್‌ಗಳಲ್ಲಿ 21 ರನ್ ಗಳಿಸಿದ ಜಡೇಜಾ ಜೋರ್ಡನ್ ಎಸೆತದಲ್ಲಿ ಔಟಾದರು.
ಜೋರ್ಡನ್ ತಮ್ಮ ಆಕ್ರಮಣಕಾರಿ ಬೌಲಿಂಗ್ ಮುಂದುವರಿಸಿದ್ದು, ನಂತರ ಬಂದ ಕಾರ್ತಿಕ್ ಕೂಡಾ ಈತನ ಬಾಲ್‌ಗೆ ಡಿವಿಲಿಯರ್ಸ್ ಕೈಗೆ ಕ್ಯಾಚಿತ್ತು ಪೆವಿಲಿಯನ್‌ಗೆ ನಡೆದರು. ಒಂದರ ಹಿಂದೆ ಒಂದು ಎಂಬಂತೆ ವಿಕೆಟ್‌ಗಳುರುಳುತ್ತಿರುವಾಗ ಎಜೆ ಫಿಂಚ್ ಮಾತ್ರ ಆಪತ್ಬಾಂದವನಂತೆ ಕಂಡು ಬಂದರು. ಫಾರ್ಮ್‌ನಲ್ಲಿದ್ದ ಫಿಂಚ್‌ಗೆ ಜತೆಯಾಗಲು ಬಂದ ಬ್ರಾವೋ(1) ರನ್‌ಗಳಿಸಿ ಚಹಾಲ್ ಬೌಲ್‌ಗೆ ಎಲ್‌ಬಿಡಬ್ಲ್ಯೂ ಆಗಿ ಔಟಾದಾಗ, ಅವರ ಹಿಂದೆಯೇ ಮೂರು ರನ್ ಗಳಿಸಿ ಎ ಡಿ ನಾಥ್ ಪೆವಿಲಿಯನ್‌ಗೆ ಮರಳಿದರು.
ಆಮೇಲೆ ಬಂದ ಪಿ ಕುಮಾರ್ (1) ಮತ್ತು ಡಿ ಎಸ್ ಕುಲಕರ್ಣಿ (2) ಜೋರ್ಡನ್ ಬೌಲಿಂಗ್ ದಾಳಿಗೆ ವಿಕೆಟ್ ಕಳೆದು ಕೊಂಡರು. ಇವರ ನಂತರ ಬಂದ ವಿಪಿ ತಂಬೆ ಏಕಾಂಗಿ ಹೋರಾಟ ಮಾಡುತ್ತಿದ್ದು ಫಿಂಚ್‌ಗೆ ಸ್ವಲ್ಪ ಹೊತ್ತು ನೆರವಾದರು. 19 ನೇ ಓವರ್‌ನಲ್ಲಿ ಸಚಿನ್ ಬೇಬಿ ಬಾಲ್‌ಗೆ ಅರವಿಂದ್ ಕ್ಯಾಚಿತ್ತು ಫಿಂಚ್ (37) ಔಟಾದಾಗ ಗುಜರಾತ್ ಲಯನ್ಸ್ ಮುಗ್ಗರಿಸಿ ಬಿತ್ತು. ಕೊನೆಯ ಬ್ಯಾಟ್ಸ್‌ಮೆನ್ ಆಗಿ ಕೌಶಿಕ್ (0) ಬಂದ ಕೂಡಲೇ ಸಚಿನ್ ಬೇಬಿ ಬಾಲ್‌ಗೆ ಅರವಿಂದ್‌ಗೆ ಕ್ಯಾಚಿತ್ತು ಪೆವಿಲಿಯನ್ ನಡೆದರು. ಪಿವಿ ತಂಬೆ 19 ಬಾಲ್‌ಗಳಲ್ಲಿ ಏಳು ರನ್ ಗಳಿಸಿ ಔಟಾಗದೆ ಉಳಿದರು.
ಪ್ರಸ್ತುತ ಪಂದ್ಯದಲ್ಲಿ 18. 4 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದು ಕೊಂಡ ಗುಜರಾತ್ ಲಯನ್ಸ್ ಗೆ 104 ರನ್‌ಗಳನ್ನಷ್ಟೇ ದಾಖಲಿಸಲು ಸಾಧ್ಯವಾಯಿತು.
ಆರ್‌ಸಿಬಿ ಪರವಾಗಿ ಜೋರ್ಡನ್ 4, ಚಹಾಲ್ 3, ಸಚಿನ್ ಬೇಬಿ 2 ಮತ್ತು ಅರವಿಂದ್ 1 ವಿಕೆಟ್ ಗಳಿಸಿದರು.
52 ಬಾಲ್‌ಗಳಲ್ಲಿ ಅಜೇಯ 129 ರನ್ ದಾಖಲಿಸಿದ ಎಬಿ ಡಿ ವಿಲಿಯರ್ಸ್ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Virat Kohliವಿರಾಟ್ ಕೊಹ್ಲಿRoyal Challengers Bangaloreರಾಯಲ್ ಚಾಲೆಂಜರ್ಸ್ ಬೆಂಗಳೂರುRCBIPL 2016ಐಪಿಎಲ್ 2016Gujarat Lionsಗುಜರಾತ್ ಲಯನ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


