ಕ್ರಿಕೆಟ್

ವಿಕೆಟ್ ಕೀಪರ್‌ನ್ನು ಸ್ಟಂಪ್ ನಿಂದ ಹೊಡೆದು ಕೊಂದ ಬ್ಯಾಟ್ಸ್‌ಮೆನ್

ಪಂದ್ಯದಲ್ಲಿ ಶಿಖ್ದರ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದನು. ಬ್ಯಾಟ್ಸ್‌ಮೆನ್ ಔಟಾಗಿದ್ದಾರೆ ಎಂದು ಮನವಿ ಮಾಡಿದಾಗ ನೋ ಬಾಲ್ ಎಂದು ಹೇಳಿದ...

ವಿಕೆಟ್ ಕೀಪರ್‌ನ್ನು ಸ್ಟಂಪ್ ನಿಂದ ಹೊಡೆದು ಕೊಂದ ಬ್ಯಾಟ್ಸ್‌ಮೆನ್
ಸಾಂದರ್ಭಿಕ ಚಿತ್ರ
Published On :
ಢಾಕಾ:  ಬಾಂಗ್ಲಾದೇಶದ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ವಿಕೆಟ್ ಕೀಪರ್ ಆಗಿದ್ದ ಹದಿಹರೆಯದ ಬಾಲಕನನ್ನು ಬ್ಯಾಟ್ಸ್‌ಮೆನ್ ಸ್ಟಂಪ್‌ನಿಂದ ಹೊಡೆದು ಕೊಂದ ಘಟನೆ ವರದಿಯಾಗಿದೆ. 
16 ಹರೆಯದ ಬಾಬುಲ್ ಶಿಖ್ದರ್ ಹತ್ಯೆಗೊಳಗಾದ ಬಾಲಕ. ಗುರುವಾರ ಢಾಕಾದಲ್ಲಿ ಬಾಬುಲ್‌ನ ಗೆಳೆಯರ ನಡುವೆ ಕ್ರಿಕೆಟ್ ಪಂದ್ಯ ನಡೆದಿದ್ದು, ನೋ ಬಾಲ್ ಬಗ್ಗೆಯುಂಟಾದ ತರ್ಕವೇ ಈ ಹತ್ಯೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಪಂದ್ಯದಲ್ಲಿ ಶಿಖ್ದರ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದನು. ಬ್ಯಾಟ್ಸ್‌ಮೆನ್ ಔಟಾಗಿದ್ದಾರೆ ಎಂದು ಮನವಿ ಮಾಡಿದಾಗ ನೋ ಬಾಲ್ ಎಂದು ಹೇಳಿದ ಅಂಪೈರ್,  ಬ್ಯಾಟ್ಸ್‌ಮೆನ್‌ಗೆ ಆಟ ಮುಂದುವರಿಸುವಂತೆ ಸೂಚಿಸಿದ್ದರು. ಎರಡನೇ ಬಾಲ್ ಗೂ ಅಂಪೈರ್ ಅದೇ ರೀತಿ ಮಾಡಿದಾಗ, ಶಿಖ್ದರ್ ಅಂಪೈರ್‌ನ್ನು ಪ್ರಶ್ನಿಸಿದ್ದನು.
ಆ ಹೊತ್ತಿಗೆ ರೊಚ್ಚಿಗೆದ್ದ ಬ್ಯಾಟ್ಸ್‌ಮೆನ್ ಸ್ಟಂಪ್ ಕಿತ್ತು ಶಿಖ್ದರ್‌ನ ತಲೆಯ ಹಿಂಭಾಗಕ್ಕೆ ಏಟು ನೀಡಿದ್ದಾನೆ. ಏಟು ಬಿದ್ದ ಕೂಡಲೇ ಕುಸಿದು ಬಿದ್ದ ಶಿಖ್ದರ್ ನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ದಾರಿಯಲ್ಲೇ ಆತ ಮೃತಪಟ್ಟಿದ್ದನು ಎಂದು ಪೊಲೀಸ್ ವರಿಷ್ಠಾಧಿಕಾರಿ ಭುಯಿಯಾನ್ ಮೆಹಬೂಬ್ ಹಸನ್ ಹೇಳಿದ್ದಾರೆ.
ಹತ್ಯೆ ಮಾಡಿದ ಬ್ಯಾಟ್ಸ್‌ಮೆನ್ ಈಗ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.