ಕ್ರಿಕೆಟ್

ಐಸಿಸಿ ಮೇಲಿನ ವ್ಯಾಮೋಹ: ಮಾತೃಸಂಸ್ಥೆಗೆ ಕೈಕೊಟ್ಟ ಶಶಾಂಕ್ ಮನೋಹರ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷ ಹುದ್ದೆ ಸ್ವೀಕರಿಸಿದ್ದ ಮಿಸ್ಟರ್ ಕ್ಲೀನ್ ಖ್ಯಾತಿಯ ಶಶಾಂಕ್ ಮನೋಹರ್ ಸದ್ಯ ತಮ್ಮ ಸ್ಥಾನಕ್ಕೆ ಗುಡ್...

ಐಸಿಸಿ ಮೇಲಿನ ವ್ಯಾಮೋಹ: ಮಾತೃಸಂಸ್ಥೆಗೆ ಕೈಕೊಟ್ಟ ಶಶಾಂಕ್ ಮನೋಹರ್
ಶಶಾಂಕ್ ಮನೋಹರ್
Published On :
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷ ಹುದ್ದೆ ಸ್ವೀಕರಿಸಿದ್ದ ಮಿಸ್ಟರ್ ಕ್ಲೀನ್ ಖ್ಯಾತಿಯ ಶಶಾಂಕ್ ಮನೋಹರ್ ಸದ್ಯ ತಮ್ಮ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ. 
ಕಳಂಕಿತ ಬಿಸಿಸಿಐನಲ್ಲಿ ಸ್ವಚ್ಛತಾ ಅಭಿಯಾನದ ಗುರುತರ ಹೊಣೆ ವಹಿಸಿಕೊಂಡಿದ್ದ ಶಶಾಂಕ್ ಮನೋಹರ್ ಅವರು ತಮ್ಮ ಅವಧಿ ಇನ್ನು ಒಂದುವರೆ ವರ್ಷ ಇರುವಂತೆ ಮಾರ್ಗಮಧ್ಯದಲ್ಲೇ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿ ಪಲಾಯನ ಮಾಡುತ್ತಿರುವುದು ಎಷ್ಟು ಸರಿ ಎಂಬ ಚರ್ಚೆಗಳು ಶುರವಾಗಿವೆ. 
ಇನ್ನು ಬಿಸಿಸಿಐನಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನ್ಯಾ. ಲೋಧಾ ನೇತೃತ್ವದ ಸಮಿತಿ ವರದಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿರುವ ಹೊತ್ತಿನಲ್ಲೇ, ಶಶಾಂಕ್ ಮನೋಹರ್ ಅವರು ಏಕಾಏಕಿ ಈ ಹುದ್ದೆ ತೊರೆದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. 
ಶಶಾಂಕ್ ಅವರ ದಿಢೀರ್ ರಾಜಿನಾಮೆ ನಿರ್ಧಾರ ಸದ್ಯ ಬಿಸಿಸಿಐನಲ್ಲಿ ತಳಮಳಕ್ಕೆ ಕಾರಣವಾಗಿದೆ. ಹಲವು ಬದಲಾವಣೆಗಳಿಗೆ ದಾರಿ ದೀಪವಾಗುತ್ತಾರೆಂಬ ನಂಬಿಕೆ ಹುಸಿಯಾಗಿದೆ. ಬಿಸಿಸಿಐಗೆ ಶಶಾಂಕ್ ರಾಜಿನಾಮೆ ನೀಡುತ್ತಿರುವುದು ಅವರ ಸ್ವಂತ ಇತಾಸಕ್ತಿಗೆ ಹೊರತು ಯಾವುದೋ ಮಹತ್ಕಾರ್ಯಕಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಧ್ಯಕ್ಷರಾಗುವವರು ವಿಶ್ವದ ಯಾವುದೇ ಕ್ರಿಕೆಟ್ ಮಂಡಳಿಯಲ್ಲಿ ಯಾವುದೇ ಹುದ್ದೆ ಹೊಂದಿರಬಾರದು ಎಂಬ ನಿಯಮದಿಂದಾಗಿ ಐಸಿಸಿ ಅಧ್ಯಕ್ಷ ಗಾಧಿಯ ಮೇಲಿನ ವ್ಯಾಮೋಹದಿಂದಾಗಿ ಮಾತೃಸಂಸ್ಥೆ ಬಿಸಿಸಿಐಯನ್ನು ತೊರೆಯಲಿದ್ದಾರೆ. 
ಮಿಸ್ಟರ್ ಕ್ಲೀನ್ ಖ್ಯಾತಿಯಿಂದಾಗಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ಶಶಾಂಕ್ ಮನೋಹರ್ ಅವರನ್ನು ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಬಹುದು ಎಂದು ಸುಪ್ರೀಕೋರ್ಟ್ ಸೂಚಿಸಿತ್ತು. ಆದರೆ ಇಂದು ಶಶಾಂಕ್ ಈ ಎಲ್ಲಾ ನಂಬಿಕೆಗಳನ್ನು ಹುಸಿಗೊಳಿಸಿ ಪಲಾಯನ ಮಾಡುತ್ತಿದ್ದಾರೆ. ಬಿಸಿಸಿಐನ ಕಳಂಕ ತೊಳೆಯಲಿ ಎಂಬ ಕಾರಣಕ್ಕಾಗಿ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಆದರೆ ಈ ಹಾದಿಯಲ್ಲಿ ಮಾರ್ಗಮಧ್ಯದಲ್ಲೇ ಅವರು ಕೈಚೆಲ್ಲಿದ್ದು, ಬಿಸಿಸಿಐನ ಹಲವು ಪದಾಧಿಕಾರಿಗಳಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.
ಶಶಾಂಕ್ ಮನೋಹರ್ ಅವರು ಬಿಸಿಸಿಐ ತೊರೆಯಲು ಕಾರಣ?
ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಮನೋಹರ್ ಬಹುತೇಕ ಒಮ್ಮತದ ಅಭ್ಯರ್ಥಿಯಾದ್ದಾರೆ. 
ನ್ಯಾ. ಲೋಧಾ ನೇತೃತ್ವದ ಸಮಿತಿ ವರದಿ ಜಾರಿಯಾದರೆ, ಬಿಸಿಸಿಐ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಉಳಿಯುವುದಿಲ್ಲ. 
ಬಿಸಿಸಿಐ ಅಧ್ಯಕ್ಷಗಾದಿಗಿಂತ ಐಸಿಸಿ ಅಧ್ಯಕ್ಷ ಹುದ್ದೆ ಉತ್ತಮ ಎಂಬ ಕಾರಣಕ್ಕೆ ಐಸಿಸಿ ಕಡೆ ಮುಖ ಮಾಡಿದ್ದಾರೆ.
ಬಿಸಿಸಿಐ ನೂತನ ಅಧ್ಯಕ್ಷರು ಯಾರು?
ಶಶಾಂಕ್ ಮನೋಹರ್ ಅವರ ರಾಜಿನಾಮೆ ಹಿನ್ನೆಲೆ ತೆರವುಗೊಂಡಿರುವ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಪೈಪೋಟಿ ಶುರುವಾಗಿದೆ. ಸದ್ಯ ಬಿಸಿಸಿಐನ ಕಾರ್ಯದರ್ಶಿ ಅನುರಾಗ್ ಠಾಕೂರ್, ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಜಯ್ ಶಿರ್ಕೆ ಅವರ ಹೆಸರು ಕೇಳಿಬರುತ್ತಿವೆ. ಈ ಮೂವರ ಪೈಕಿ ಅನುರಾಗ್ ಠಾಕೂರ್ ಹೆಸರು ಮುಂಚೂಣಿಯಲ್ಲಿದೆ. ಇನ್ನು ಬಿಸಿಸಿಐ ನಿಯಮಗಳ ಪ್ರಕಾರ, ಅಧ್ಯಕ್ಷರ ನಿರ್ಗಮನದ 15 ದಿನಗಳಲ್ಲಿ ಸಭೆ ಕರೆದು ಹೊಸ ಅಧ್ಯಕ್ಷರ ಆಯ್ಕೆ ಮಾಡಬೇಕಿರುತ್ತದೆ. ಹೀಗಾಗಿ ಶೀಘ್ರವೇ ಬಿಸಿಸಿಐಗೆ ಹೊಸ ದಳಪತಿಯ ಆಯ್ಕೆ ನಿಚ್ಚಳವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.