ಕೆಕೆಆರ್‌ಗೆ ಶಾಕ್ ಕೊಟ್ಟ ದಿನೇಶ್ ಕಾರ್ತಿಕ್, ಲಯನ್ಸ್‌ಗೆ 5 ವಿಕೆಟ್‌ಗಳಿಂದ ಜಯ
ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರ ಅರ್ಧಶತಕದ ನೆರವಿನಿಂದಾಗಿ ಗುಜರಾತ್ ಲಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ...

ಕೋಲ್ಕತ್ತಾ: ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರ ಅರ್ಧಶತಕದ ನೆರವಿನಿಂದಾಗಿ ಗುಜರಾತ್ ಲಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ ಓವರ್ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. 159 ರನ್ ಗಳ ಬೆನ್ನಟ್ಟಿದ ಲಯನ್ಸ್ ತಂಡ 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಜಯದ ನಗೆ ಬೀರಿತು. ಇದರೊಂದಿಗೆ ಲಯನ್ಸ್ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.
ಗುಜರಾತ್ ಲಯನ್ಸ್ ಪರ ಡ್ವೇನ್ ಸ್ಮಿತ್ 27, ಬ್ರೆಂಡಮ್ ಮೆಕ್ಕಲಂ 29, ಸುರೇಶ್ ರೈನಾ 14, ದಿನೇಶ್ ಕಾರ್ತಿಕ್ 51, ಆರನ್ ಫಿಂಚ್ 29, ರವೀಂದ್ರ ಜಡೇಜಾ ಅಜೇಯ 9, ಡ್ವೇನ್ ಬ್ರಾವೋ 0 ರನ್ ಗಳಿಸಿದ್ದಾರೆ.
ಕೆಕೆಆರ್ ಪರ ಮಾರ್ಕೆಲ್, ಶಕೀಬ್, ಪಿಯೂಫ್ ಚಾವ್ಲಾ ಮತ್ತು ಹಾಗ್ ತಲಾ 1 ವಿಕೆಟ್ ಪಡೆದಿದ್ದಾರೆ.
ಕೆಕೆಆರ್ ಪರ ಉತ್ತಪ್ಪ 14, ಗಂಭೀರ್ 5, ಮನೀಷ್ ಪಾಂಡೆ 0, ಸೂರ್ಯಕುಮಾರ್ 4, ಶಕೀಬ್ ಅಜೇಯ 66 ಹಾಗೂ ಯೂಸುಫ್ ಪಠಾಣ್ 63 ರನ್ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


