ಸ್ಟಾಯಿನಿಸ್‌ನ ಆಲ್‌ರೌಂಡರ್ ಪ್ರದರ್ಶನ; ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದ ಪಂಜಾಬ್
ಶನಿವಾರ ನಡೆದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್...

Published On :
ಚಂಡೀಗಢ್: ಶನಿವಾರ ನಡೆದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ 9 ರನ್‌ಗಳ ವಿಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 5 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿ ಕ್ರೀಸ್‌ಗಿಳಿದ ಡೆಲ್ಲಿ ತಂಡದ ಸಂಜು ಸಾಂಸನ್ ( 49) ಮತ್ತು ಕರಣ್ ನಾಯರ್ (23) ರನ್ ಗಳಿಸಿದರೂ ಡೆಲ್ಲಿ ಡೇರ್ ಡೆವಿಲ್ಸ್‌ನ ಇನ್ನಿಂಗ್ಸ್ 5 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿ ಅಂತ್ಯಗೊಂಡಿತು.
ಕ್ವಿಂಟನ್ ಡಿ ಕಾಕ್ (52) ಮತ್ತು ಸಂಜು ಸಾಂಸನ್ (49) ಆರಂಭಿಕ ಜತೆಯಾಟವು ಡೆಲ್ಲಿ ತಂಡಕ್ಕೆ 70 ರನ್‌ಗಳನ್ನು ನೀಡಿತ್ತು. ಡಿಕಾಕ್ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಗಳಿಸಿದ್ದರು. ಅದೇ ವೇಳೆ ಸಂಜು 35 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿದ್ದರು. ಸಂಜು ಔಟಾದೊಡನೆ ಡೆಲ್ಲಿಯ ಹೋರಾಟವೂ ಮಂಕಾಗುತ್ತಾ ಬಂತು.
ಪಂಜಾಬ್ ಪರವಾಗಿ ಮಾರ್ಕಸ್ ಸ್ಟಾಯಿನಿಸ್ ಮತ್ತು ವೃದ್ಧಿಮಾನ್ ಸಾಹಾ ತಲಾ 52 ರನ್ ಗಳಿಸುವ ಮೂಲಕ ತಮ್ಮ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಕೊನೆ ಗಳಿಗೆಯಲ್ಲಿ 5 ಎಸೆತಗಳಲ್ಲಿ 16 ರನ್ ಗಳಿಸಿದ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡಿ ಪ್ರಶಂಸೆಗೆ ಅರ್ಹರಾದರು.
ಪಂಜಾಬ್ ಪರವಾಗಿ ಮೋರಿಸ್ 2 ಮತ್ತು ಜಹೀರ್ ಖಾನ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಗಳಿಸಿದ್ದು, ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಸ್ಟಾಯಿನಿಸ್ 3, ಕಾರಿಯಪ್ಪ ಮತ್ತು ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್IPLಐಪಿಎಲ್Delhi DaredevilsKings XI Punjabಕಿಂಗ್ಸ್ ಇಲೆವನ್ ಪಂಜಾಬ್Marcus Stoinisಮಾರ್ಕಸ್ ಸ್ಟಾಯಿನಿಸ್ಡೆಲ್ಲಿ ಡೇರ್‌ಡೆವಿಲ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


