ಆರ್ಸಿಬಿ ನಾಯಕ ಕೊಹ್ಲಿಗೆ ಏಕೆ ನಿಷೇಧದ ಭೀತಿ?
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಬೌಲಿಂಗ್ ನಿಂದಾಗಿ ಹಲವು ಪಂದ್ಯಗಳನ್ನು ಸೋತಿದೆ...

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಬೌಲಿಂಗ್ ನಿಂದಾಗಿ ಹಲವು ಪಂದ್ಯಗಳನ್ನು ಸೋತಿದ್ದು, ನಾಯಕ ವಿರಾಟ್ ಕೊಹ್ಲಿಗೆ ಬೌಲಿಂಗ್ ನಿರ್ವಹಣೆ ಸಾಕಾಗಿ ಹೋಗಿದೆ.
ಈ ಮಧ್ಯೆ ನಿಧಾನಗತಿ ಬೌಲಿಂಗ್ ನಿಂದಾಗಿ ನಾಯಕ ವಿರಾಟ್ ಕೊಹ್ಲಿ ಟೂರ್ನಿಯ ಒಂದು ಪಂದ್ಯ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ.
ಟೂರ್ನಿಯಲ್ಲಿ ಸದ್ಯ ಆಡಿರುವ 7 ಪ೦ದ್ಯಗಳ ಪೈಕಿ ನಿಧಾನಗತಿ ಬೌಲಿಂಗ್ ನಿಂದಾಗಿ ಕೊಹ್ಲಿ ಈಗಾಗಲೇ 2 ಬಾರಿ ಒಟ್ಟು 36 ಲಕ್ಷ ರೂ. ದ೦ಡ ತೆತ್ತಿದ್ದಾರೆ. ಇದೀಗ ಮತ್ತೊಮ್ಮೆ ಈ ತಪ್ಪು ಪುನರಾವತ೯ನೆಯಾದರೆ, ಲೀಗ್‍ನಲ್ಲಿ ಮತ್ತೆ 30 ಲಕ್ಷ ರು. ದ೦ಡ ಮತ್ತು 1 ಪ೦ದ್ಯ ನಿಷೇಧಕ್ಕೊಳಗಾಗಲಿದ್ದಾರೆ.
ಐಪಿಎಲ್ ನಲ್ಲಿ ಆರ್ಸಿಬಿ ಫ್ಲೇ ಆಫ್ ಗೆ ಲಗ್ಗೆ ಹಿಡಬೇಕಾದರೆ ಮುಂದಿನ ಪ್ರತಿ ಪಂದ್ಯದಲ್ಲೂ ಜಯ ಗಳಿಸುವುದು ಅನಿವಾರ್ಯ. ಸದ್ಯ ಬ್ಯಾಟಿಂಗ್ ಒಂದನ್ನೆ ನಂಬಿಕೊಂಡಿರುವ ಆರ್ಸಿಬಿಗೆ ಭರ್ಜರಿ ಬ್ಯಾಟಿಂಗ್ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅಗತ್ಯ. ಅಂತಹ ವಿರಾಟ್ ನಿಷೇಧಕ್ಕೊಳಗಾದರೆ ಇದರಿ೦ದ ಆರ್‍ಸಿಬಿ ತ೦ಡಕ್ಕೂ ಹೊಡೆತ ಬೀಳುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


