ಐಪಿಎಲ್ ಬಳಿಕ ಭಾರತದ ವಿಂಡೀಸ್ ಪ್ರವಾಸ
ಟಿ20 ವಿಶ್ವಕಪ್ ಮತ್ತು ಐಪಿಎಲ್ ಬಳಿಕ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ...

ನಾಗಪುರ: ಟಿ20 ವಿಶ್ವಕಪ್ ಮತ್ತು ಐಪಿಎಲ್ ಬಳಿಕ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದೇ ಜುಲೈ- ಆಗಸ್ಟ್ ತಿಂಗಳಲ್ಲಿ ಭಾರತ ತಂಡ 4 ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಡೇವ್ ಕ್ಯಾಮರಾನ್ ಕೂಡ ಹೇಳಿದ್ದಾರೆ. ಇದರೊಂದಿಗೆ ಐಸಿಸಿಯ ವೇಳಾಪಟ್ಟಿಯನ್ವಯ ಉಭಯ ತಂಡಗಳ ದ್ವಿಪಕ್ಷೀಯ ಸರಣಿ ಪುನರಾರಂಭಗೊಳ್ಳುವುದು ಖಚಿತಪಟ್ಟಿದೆ. 2014ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವಿಂಡೀಸ್ ಕ್ರಿಕೆಟಿಗರು ವಿಂಡೀಸ್ ಕ್ರಿಕೆಟ್ ಮಂಡಳಿಯೊಂದಿಗಿನ ವೇತನ ವಿವಾದದಿಂದಾಗಿ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹೋದ ಬಳಿಕ ಬಿಸಿಸಿಐ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಬಿಸಿಯಾಗಿತ್ತು. ಇದಕ್ಕೆ ಅಗಾಧ ಮೊತ್ತದ ಪರಿಹಾರವನ್ನೂ ಕೇಳಿತ್ತು.
ಆ ಪ್ರಕರಣದ ಬಳಿಕ ಇದೀಗ ಮತ್ತೆ ಉಭಯ ತಂಡಗಳ ನಡುವಿನ ಸರಣಿ ಪುನಾರಂಭಕ್ಕೆ ಗ್ನೀನ್ ಸಿಗ್ನಲ್ ದೊರೆತಿದೆ. "ಭಾರತ ತಂಡ ಜುಲೈ-ಆಗಸ್ಟ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇದು ಅಧಿಕೃತ. ಈ ಸರಣಿ ಕೆರಿಬಿಯನ್ ಕ್ರಿಕೆಟ್ ಲೀಗ್ ವೇಳೆಯಲ್ಲೇ ನಡೆಯಲಿದೆ. ನಮ್ಮ ಮುಂದೆ ಬೇರೆ ಮಾರ್ಗವೇ ಇಲ್ಲ. ಜಾಗತಿಕ ಕ್ರಿಕೆಟ್ ವೇಳಾಪಟ್ಟಿ ಅಷ್ಟೊಂದು ನಿಬಿಡವಾಗಿದೆ. ಸಿಪಿಎಲ್ ಟೂರ್ನಮೆಂಟ್ ಜೂನ್ ಕೊನೆಯ ವಾರದಲ್ಲಿ ಮೊದಲ್ಗೊಂಡು ಆಗಸ್ಟ್ ಮೊದಲ ವಾರದಲ್ಲಿ ಮುಗಿಯಲಿದೆ..." ಎಂದು ಕ್ಯಾಮರಾನ್ 'ಕ್ರಿಕೆಟ್ ರೇಡಿಯೋ' ಸಂದರ್ಶನದ ವೇಳೆ ತಿಳಿಸಿದರು.
'ನಾವು ಶೀಘ್ರದಲ್ಲೇ ಪಂದ್ಯಗಳ ದಿನಾಂಕ ಹಾಗೂ ತಾಣಗಳನ್ನು ಪ್ರಕಟಿಸುತ್ತೇವೆ. ಸಿಪಿಎಲ್‌ನಲ್ಲಿ ಆಡಲು ತುದಿಗಾಲಲ್ಲಿ ನಿಂತಿರುವ ನಮ್ಮ ಕ್ರಿಕೆಟಿಗರ ಬಗ್ಗೆ ವಿಷಾದವಿದೆ...' ಎಂದೂ ಕ್ಯಾಮರಾನ್ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


