ಟ್ವಿಟರ್ ಛೀಮಾರಿ; ಭಜ್ಜಿ ಆಯ್ತು ಈಗ ಅಶ್ವಿನ್ ಸರದಿ
ಬುಧವಾರವಷ್ಟೇ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಾಲೆಳೆದು ಅಭಿಮಾನಿಯೊಬ್ಬ ಛೀಮಾರಿ ಹಾಕಿಸಿಕೊಂಡ ಘಟನೆ ಹಸಿರಾಗಿರುವಾಗಲೇ ಮತ್ತೊರ್ವ ವ್ಯಕ್ತಿ ಭಾರತೀಯ ಕ್ರಿಕೆಟಿಗನಿಂದ ಛೀಮಾರಿ ಹಾಕಿಸಿಕೊಂಡಿದ್ದಾನೆ.

ನವದೆಹಲಿ: ಬುಧವಾರವಷ್ಟೇ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಾಲೆಳೆದು ಅಭಿಮಾನಿಯೊಬ್ಬ ಛೀಮಾರಿ ಹಾಕಿಸಿಕೊಂಡ ಘಟನೆ ಹಸಿರಾಗಿರುವಾಗಲೇ ಮತ್ತೊರ್ವ ವ್ಯಕ್ತಿ ಭಾರತೀಯ ಕ್ರಿಕೆಟಿಗನಿಂದ ಛೀಮಾರಿ ಹಾಕಿಸಿಕೊಂಡಿದ್ದಾನೆ.
ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯವಿದ್ದು, ಇದರ ಹಿನ್ನಲೆಯಲ್ಲಿ ಆರ್ ಅಶ್ವಿನ್ ಅವರಿಗೆ ಟ್ವೀಟ್ ಮಾಡಿರುವ ಶ್ರೀಲಂಕಾದ ಕ್ರಿಕೆಟ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿ, ಇದೇ ನಿಮ್ಮ ಕೊನೆಯ ನಗುವಾಗಲಿದೆ. ವಿಂಡೀಸ್ ನ ದೈತ್ಯ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ನಿಮ್ಮನ್ನು (ಭಾರತ ತಂಡವನ್ನು) ಧೂಳಿ ಪಟಮಾಡಲಿದ್ದಾನೆ. ನೀನು ಆ ಪಂದ್ಯ ಆಡಬೇಡ ಎಂದು ಅಶ್ವಿನ್ ಅವರ ಕಾಲೆಳೆದಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆರ್ ಅಶ್ವಿನ್, ಬಹುಶಃ ನೀನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಿರಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದ್ದಕೆ ಉತ್ತರಿಸಿರುವ ಆತ ಹೌದು ನಾನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಿದ್ಗೇನೆ. ಆದರೆ ನಾಳೆ ಮತ್ತೆ ನೋಡುತ್ತೇನೆ. ಕ್ರಿಸ್ ಗೇಯ್ಲ್ ನಿಮ್ಮನ್ನು ಧೂಳಿಪಟ ಮಾಡುವುದನ್ನು ಮತ್ತು ಸೋಲಿನ ಬಳಿಕ ನಿಮ್ಮ ಪೇಚು ಮೊರೆಯನ್ನು ನಾನು ನೋಡಬೇಕು ಎಂದು ಹೇಳಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಅಶ್ವಿನ್ ನಾಯಿ ಹಿಡಿಯುವ ಗಾಡಿ ಬಂದರೆ ನಿನ್ನನ್ನು ಹಿಡಿದುಕೊಡುತ್ತೇನೆ. ನೀನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಬೇಕು ಎಂದು ಗುಡುಗಿದ್ದಾರೆ.
ಈ ಟ್ವೀಟ್ ಸರಣಿ ಇದೀಗ ವೈರಲ್ ಆಗಿದ್ದು, ಆ ವಕ್ತಿಯ ಟ್ವೀಟ್ ಗಳಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಲಿ ಚಾಂಪಿಯನ್ ಆಗಿದ್ದುಕೊಂಡು ಲೀಗ್ ಹಂತದಲ್ಲಿಯೇ ನಿನ್ನ ತಂಡ (ಶ್ರೀಲಂಕಾ) ಮುಗ್ಗರಿಸಿದೆ. ಹೀಗಿರುವಾಗ ನೀನು ಹೇಗೆ ಬೇರೆ ತಂಡ ಕುರಿತು ಮಾತನಾಡುತ್ತೀಯಾ ಎಂದು ಅಭಿಮಾನಿಗಳು ಆ ವ್ಯಕ್ತಿಯನ್ನು ಕೆಣಕಿದ್ದಾರೆ.
ಅಶ್ವಿನ್ ಮತ್ತು ಆ ಶ್ರೀಲಂಕಾ ಕ್ರಿಕೆಟ್ ಅಭಿಮಾನಿಯ ಸರಣಿ ಟ್ವೀಟ್ ಗಳು ಹೀಗಿವೆ.
Indians are prasing @imVkohli now, bt if india loose in d semi's, virat may hav to rent a house somewhere.. to spend that nyt !!!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


