ತನ್ನ ಟೀಂ ಸೋತರೂ ಅಫ್ಘಾನ್ ಆಟಗಾರರ ಖುಷಿಯಲ್ಲಿ ಭಾಗಿಯಾದ ಕ್ರಿಸ್ ಗೇಲ್!
ವಿಶ್ವಕಪ್ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿದ ನಂತರ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಖುಷಿಯಲ್ಲಿ ಕುಣಿಯುತ್ತಿದ್ದರೆ, ಕ್ರಿಸ್ ಗೇಲ್ ...

Published On :
ನಾಗ್ಪುರ: ವಿಶ್ವಕಪ್ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿದ ನಂತರ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಖುಷಿಯಲ್ಲಿ ಕುಣಿಯುತ್ತಿದ್ದರೆ, ಕ್ರಿಸ್ ಗೇಲ್ ಕೂಡಾ ಅವರ ಜತೆ ಭಾಗಿಯಾಗಿದ್ದಾರೆ.
ಅಫ್ಘಾನ್ ಕ್ರಿಕೆಟಿಗರು ತನ್ನ ತಂಡವನ್ನು ಸೋಲಿಸಿದ್ದರೂ, ಅವರ ಗೆಲುವಿನ ಕ್ಷಣದಲ್ಲಿ ತಾನೂ ಭಾಗಿಯಾಗುವ ಮೂಲಕ ಕ್ರಿಸ್‌ಗೇಲ್ ಕ್ರಿಕೆಟ್ ಎಂಬುದು ಆಟವಷ್ಟೇ, ಅಲ್ಲಿ ಸೋಲು ಗೆಲವು ಇದ್ದದ್ದೇ. ಇಲ್ಲಿ ತಂಡಗಳ ನಡುವೆ ಯಾವುದೇ ಅಸಹನೆ, ದ್ವೇಷ ಇರುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವೆಸ್ಟ್ ಇಂಡೀಸ್‌ನ್ನು 6 ರನ್‌ಗಳಿಂದ ಪರಾಭವಗೊಳಿಸಿತ್ತು. ಪಂದ್ಯ ಮುಗಿದ ನಂತರ ಅಫ್ಘಾನಿಸ್ತಾನದ ಆಟಗಾರರಿಗೆ ಅಭಿನಂದನೆ ತಿಳಿಸಲು ಕ್ರಿಸ್ ಗೇಲ್ ಮೈದಾನಕ್ಕಿಳಿದಿದ್ದರು.
ಅಲ್ಲಿ ಅಫ್ಘಾನ್ ಕ್ರಿಕೆಟಿಗರ ಜತೆ ಸ್ಟೆಪ್ ಹಾಕಿದ ಗೇಲ್ ನಂತರ ಸೆಲ್ಫೀ ಮತ್ತು ಗ್ರೂಪ್ ಫೋಟೋಗೆ ಪೋಸ್ ಕೊಟ್ಟು ಕೆಲವು ಸಂತೋಷದ ಕ್ಷಣಗಳನ್ನು ಕಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
AfghanistanWest indiesChris Gayleಅಫ್ಘಾನಿಸ್ತಾನವೆಸ್ಟ್ ಇಂಡೀಸ್ಕ್ರಿಸ್ ಗೇಲ್T20 World CupCricket Offbeatಕ್ರಿಕೆಟ್ ಸ್ವಾರಸ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


