ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಐಸಿಸಿಯಿಂದ ಸಿಗುವ ಬಹುಮಾನ ಎಷ್ಟು ಗೊತ್ತಾ...?
ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಬಹುಮಾನದ ಮೊತ್ತ ಎಷ್ಟು ಸಿಗುತ್ತದೆ ಗೊತ್ತಿದೆಯಾ....

ದುಬೈ: ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಬಹುಮಾನದ ಮೊತ್ತ ಎಷ್ಟು ಸಿಗುತ್ತದೆ ಗೊತ್ತಿದೆಯಾ.
ಐಸಿಸಿ ಪ್ರಸಕ್ತ ಟಿ20 ವಿಶ್ವಕಪ್ ನಿಂದ ಬಹುಮಾನದ ಮೊತ್ತವನ್ನು ಶೇಖಡ 33 ರಷ್ಟು ಏರಿಸಿದ್ದು, ಆ ಮೂಲಕ ಟಿ20 ವಿಶ್ವಕಪ್ ಗೆದ್ದ ತಂಡ 3.5 ಮಿಲಿಯನ್ ಡಾಲರ್ ಬಹುಮಾನ ಪಡೆಯಲಿದೆ. ಇನ್ನು ರನ್ನರ್ ಅಪ್ ತಂಡ 1.5 ಮಿಲಿಯನ್ ಡಾಲರ್ ಬಹುಮಾನ ಪಡೆಯಲಿದೆ. ಸೆಮಿಫೈನಲ್ ನಲ್ಲಿ ಸೋತ ತಂಡಗಳು 7.50 ಲಕ್ಷ ಡಾಲರ್ ಸಿಗಲಿದೆ. ಇನ್ನೂ ಅಂತಿಮ 10ರ ತಂಡದಲ್ಲಿ ಪ್ರವೇಶ ಪಡೆದ ತಂಡಗಳಿಗೆ ಪ್ರತಿ ಪಂದ್ಯಕ್ಕೆ 3 ಲಕ್ಷ ಡಾಲರ್(2 ಕೋಟಿ) ಸರಣಿ ಶ್ರೇಷ್ಟ ಆಟಗಾರನಿಗೆ 10 ಸಾವಿರ ಡಾಲರ್(6.6 ಲಕ್ಷ ) ಸಿಗಲಿದೆ.
ಈ ಬಹುಮಾನ ಮೊತ್ತ ಮುಂದಿನ 2019 ಹಾಗೂ 2023ರ ಐಸಿಸಿ 50-50 ವಿಶ್ವಕಪ್ ಹಾಗೂ 2020ರ ಟಿ-20 ವಿಶ್ವಕಪ್ ತನಕ ಜಾರಿಯಲ್ಲಿರಲಿದೆ.
2014ರ ಟಿ20 ವಿಶ್ವಕಪ್ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಶ್ರೀಲಂಕಾ ತಂಡ 1.1 ಮಿಲಿಯನ್ ಡಾಲರ್(7.35 ಕೋಟಿ ರು.) ಪಡೆದುಕೊಂಡಿತ್ತು. ಇನ್ನು ರನ್ನರ್ ಅಪ್ ಆದ ಭಾರತ 5.5 ಲಕ್ಷ ಡಾಲರ್(3.67 ಕೋಟಿ ರೂ.) ಪಡೆದುಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


