ಪಾಕ್ ಸೋಲು: ತಮಾಷೆ ಮಾಡಿದ ನಿರೂಪಕನ ವಿರುದ್ಧ ಅಖ್ತರ್ ಗರಂ
ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತ..

ಕೋಲ್ಕತಾ: ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತ ವಿಚಾರವನ್ನು ತಮಾಷೆ ಮಾಡಿದ ಟಿವಿ ನಿರೂಪಕನ ವಿರುದ್ಧ ಮಾಜಿ ಆಟಗಾರ ಶೋಯೆಬ್ ಅಖ್ತರ್ ಗರಂ ಆಗಿದ್ದರು.
ಕಾರ್ಯಕ್ರಮದ ವೇಳೆ ಮೌಕಾ ಮೌಕಾ ಜಾಹಿರಾತನ್ನು ಹಿನ್ನಲೆಯಾಗಿಟ್ಟುಕೊಂಡು ನಿರೂಪಕ ತಮಾಷೆ ಮಾಡಿದ್ದರಿಂದ ಮುಜುಗರಕ್ಕೊಳಗಾದ ಅಖ್ತರ್ ಮುಲಾಜಿಲ್ಲದೇ ನಿರೂಪಕನನ್ನು ಅಲ್ಲಿಯೇ ಪ್ರಶ್ನಿಸಿದರು. ಸ್ಟಾರ್ ಸ್ಫೋರ್ಟ್ ವಾಹಿನಿ ನಡೆಸುತ್ತಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಶೊಯೆಬ್ ಅಖ್ತರ್ ಮತ್ತು ಭಾರತ ಮಾಜಿ ನಾಯಕ ಕಪಿಲ್ ದೇವ್ ಅವರು ಪಾಲ್ಗೊಂಡಿದ್ದರು. ಈ ವೇಳೆ ನಿರೂಪಕ ಜತಿನ್ ಸಪ್ರು ಪಾಕ್ ಸೋಲಿನ ಕುರಿತು ಅಖ್ತರ್ ಅವರನ್ನು ಪ್ರಶ್ನಿಸುತ್ತಿದ್ದಂತೆಯೇ ನಕ್ಕರು.
ಇದರಿಂತ ಕೋಪಗೊಂಡ ಅಖ್ತರ್ ಪ್ರಶ್ನೆ ಕೇಳುವ ಮೊದಲು ನಕ್ಕರೇಕೆ ಎಂದು ಕೋಪದಿಂದಲೇ ಕೇಳಿದರು. ಆಗ ನಿರೂಪಕ ಅದಕ್ಕೆ ತೇಪೆ ಹಚ್ಚುವ ಕಾರ್ಯ ಮಾಡಿದನಾದರೂ, ಪ್ರಶ್ನೆ ಕೇಳುವಾಗ ಗಂಭೀರವಾಗಿರುವುದನ್ನು ತಿಳಿಯಬೇಕು ಎಂದು ಅಖ್ತರ್ ಹೇಳಿದರು. ಹೀಗಾಗಿ ಮಧ್ಯ ಪ್ರವೇಶಿಸಿದ ಕಪಿಲ್ ದೇವ್ ಬ್ರೇಕ್ ತೆಗೆದುಕೊಳ್ಳಲು ನಿರೂಪಕನಿಗೆ ಸಲಹೆ ನೀಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಅದರೆ ಇದನ್ನು ಓರ್ವ ಅಂತಾರಾಷ್ಟ್ರೀಯ ಕ್ರೀಡಾಪಟುವಿನ ಮುಂದೆ ತಮಾಷೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


