ಕ್ರಿಕೆಟ್

ಮುಂದುವರಿಯಲಿದೆ "ಮೌಕಾ-ಮೌಕಾ"

ಭಾರತ ತಂಡ ಪಾಕಿಸ್ತಾನದ ವಿರುದ್ಧ ಮತ್ತೆ ವಿಶ್ವಕಪ್ ನಲ್ಲಿ ಜಯಗಳಿಸಿದ್ದು, ಮೌಕಾ-ಮೌಕಾ ಜಾಹಿರಾತು ಮತ್ತೆ ಮುಂದುವರೆಯಲಿದೆ...

ಮುಂದುವರಿಯಲಿದೆ "ಮೌಕಾ-ಮೌಕಾ"
ಮೌಕಾ-ಮೌಕಾ ಜಾಹಿರಾತು (ಸಂಗ್ರಹ ಚಿತ್ರ)
Published On :

ಕೋಲ್ಕತಾ: ಬಹುಶಃ ಪಾಕಿಸ್ತಾನದ ಅಭಿಮಾನಿಗಳು ಮೌಕಾ-ಮೌಕಾ ಜಾಹಿರಾತು ಶನಿವಾರಕ್ಕೆ ಅಂತ್ಯವಾಗಲಿದೆ ಎಂದು ಎಣಿಸಿದ್ದರು ಎಂದೆನಿಸುತ್ತದೆ. ಭಾರತ ತಂಡ ಪಾಕಿಸ್ತಾನದ ವಿರುದ್ಧ ಮತ್ತೆ ವಿಶ್ವಕಪ್ ನಲ್ಲಿ ಜಯಗಳಿಸಿದ್ದು, ಮೌಕಾ-ಮೌಕಾ ಜಾಹಿರಾತು ಮತ್ತೆ ಮುಂದುವರೆಯಲಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ವರೆಗೂ ವಿವಿಧ ವಿಶ್ವಕಪ್ ಟೂರ್ನಿಯಲ್ಲಿ 11 ಬಾರಿ ಮುಖಾಮುಖಿಯಾಗಿದ್ದು, 11 ಬಾರಿಯೂ ಭಾರತ ತಂಡವೇ ಗೆಲುವು ಸಾಧಿಸಿದೆ. ನಿನ್ನೆ ಕೋಲ್ಕತಾದಲ್ಲಿ ನಡೆದ ಪಂದ್ಯ 11ನೇ ಪಂದ್ಯವಾಗಿದ್ದು, ಆ ಪಂದ್ಯದಲ್ಲಿಯೂ ಭಾರತ ಅಭೂತಪೂರ್ವ ಜಯಗಳಿಸುವ ಮೂಲಕ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಜೈತ್ರ ಯಾತ್ರೆಯನ್ನು ಮುಂದುವರೆಸಿದೆ.

ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ 6 ಬಾರಿ ಪಾಕಿಸ್ತಾನವನ್ನು ಮಣಿಸಿದ್ದು, 19992, 1996, 1999, 2003, 2011 ಮತ್ತು 2015ರಲ್ಲಿ ಪಾಕಿಸ್ತಾನ ತಂಡವನ್ನು ವಿಶ್ವಕಪ್ ನಲ್ಲಿ ಮಣಿಸಿತ್ತು. ಇನ್ನು ಟಿ20 ವಿಶ್ವಕಪ್ ನಲ್ಲಿ ಒಟ್ಟು 5 ಬಾರಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದೆ. 2007ರಲ್ಲಿ 2 ಬಾರಿ (ಡರ್ಬನ್ ಮತ್ತು ಜೋಹಾನ್ಸ್ ಬರ್ಗ್), 2012-(ಕೊಲಂಬೋ), 2014-ಮೀರ್ ಪುರ ಮತ್ತು 2016-ಕೋಲ್ಕತಾದಲ್ಲಿ ಪಾಕಿಸ್ತಾನವನ್ನು ಮಣಿಸಿದೆ.

ಒಟ್ಟಾರೆ ಯಾವುದೇ ಮಾದರಿಯ ವಿಶ್ವಕಪ್ ನಲ್ಲಿಯೂ ಪಾಕಿಸ್ತಾನ ಭಾರತ ತಂಡವನ್ನು ಮಣಿಸಲು ವಿಫಲವಾಗಿದ್ದು, ಪಾಕಿಸ್ತಾನದ ಅಭಿಮಾನಿಗಳಲ್ಲಿ ಮಾತ್ರ ನಿರಾಶೆ ಮತ್ತೆ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.