ಪಾಕ್ ವಿರುದ್ಧ ಗೆಲುವು: ಕೊಹ್ಲಿಗೆ ಅನುಷ್ಕಾಳಿಂದ ಅಭಿನಂದನಾ ಸಂದೇಶ
ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿ ಟೀಂ ಇಂಡಿಯಾದ ಗೆಲುವಿಗೆ ಕಾರಣನಾದ ವಿರಾಟ್ ಕೊಹ್ಲಿಗೆ ಆತ ಮಾಜಿ ಪ್ರೇಯಸಿ...

Published On :
ನವದೆಹಲಿ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿ ಟೀಂ ಇಂಡಿಯಾದ ಗೆಲುವಿಗೆ ಕಾರಣನಾದ ವಿರಾಟ್ ಕೊಹ್ಲಿಗೆ ಆತ ಮಾಜಿ ಪ್ರೇಯಸಿ ಅನುಷ್ಕಾ ಶರ್ಮಾ ಅಭಿನಂದನಾ ಸಂದೇಶ ಕಳಿಸಿದ್ದಾರೆ ಎಂದು ಬಲ್ಲಮೂಲವೊಂದು ಸುದ್ದಿ ಮಾಡಿದೆ.
ಕೊಲ್ಕತ್ತಾದಲ್ಲಿ ಶನಿವಾರ ಪಾಕ್ ವಿರುದ್ಧದ ಪಂದ್ಯ ಮುಗಿದ ನಂತರ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಸಂದೇಶ ಕಳುಹಿಸಿ ಅಭಿನಂದನೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಪ್ರೀತಿ ಮುರಿದು ಬಿದ್ದಿದ್ದರೂ ಮತ್ತೆ ಅವರು ಒಂದಾಗಲಿದ್ದಾರೆ ಎಂಬ ಸೂಚನೆಯೂ ಲಭಿಸುತ್ತಿದೆ. ಅಂದಹಾಗೆ ಮತ್ತೆ ಒಂದಾಗುವ ಬಗ್ಗೆ ಕೊಹ್ಲಿಯಾಗಲೀ, ಅನುಷ್ಕಾ ಆಗಲಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
ಇತ್ತ ಕೊಹ್ಲಿ ವಿಶ್ವಕಪ್ ನಲ್ಲಿ ಬ್ಯುಸಿಯಾಗಿದ್ದರೆ, ಅನುಷ್ಕಾ ಸುಲ್ತಾನ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Anushka SharmaVirat Kohliವಿರಾಟ್ ಕೊಹ್ಲಿಟಿ20 ವಿಶ್ವಕಪ್Cricket Offbeatಕ್ರಿಕೆಟ್ ಸ್ವಾರಸ್ಯT20 Worldcup ಅನುಷ್ಕಾ ಶರ್ಮಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


